alex Certify ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ಮದುವೆ ರದ್ದುಗೊಳಿಸಿ ತೆರಳಿದ ವರ; ಕಣ್ಣೀರಾದ ವಧು ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ಮದುವೆ ರದ್ದುಗೊಳಿಸಿ ತೆರಳಿದ ವರ; ಕಣ್ಣೀರಾದ ವಧು ಕುಟುಂಬ

ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ವರ ಮದುವೆ ರದ್ದುಗೊಳಿಸಿ ತೆರಳಿದ ಆಘಾತಕಾರಿ ಘಟನೆ ವಾರಾಣಸಿಯಲ್ಲಿ ನಡೆದಿದೆ. ಇದರಿಂದ ನೊಂದ ವಧು ನ್ಯಾಯ ಕೋರಿ ಮಂಡುವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಾಜಿಪುರದ ಭದೌರಾ ಗ್ರಾಮದವರಾದ ವಧುವಿನ ಕುಟುಂಬ ವಾರಣಾಸಿಯ ಚಿಟೈಪುರದ ನಿವಾಸಿ ವಿಶಾಲ್ ಜೈಸ್ವಾಲ್ ಅವರೊಂದಿಗೆ ವಿವಾಹವನ್ನು ಏರ್ಪಡಿಸಿತ್ತು. ಸಾಕಷ್ಟು ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದು, ಇದಕ್ಕೆ ಹುಡುಗಿಯ ತಂದೆ ಆನ್‌ಲೈನ್‌ನಲ್ಲಿ 6.5 ಲಕ್ಷ ರೂಪಾಯಿ ಮತ್ತು 12 ಲಕ್ಷ ರೂಪಾಯಿ ನಗದು ನೀಡಿ ಡಿಸೆಂಬರ್ 4 ರಂದು ವಾರಣಾಸಿಯ ಮದುವೆಯನ್ನು ನಿಗದಿಪಡಿಸಲಾಗಿತ್ತು.

ಹುಡುಗಿಯ ತಂದೆ, ತನ್ನ ಕುಟುಂಬ ಮತ್ತು ಮಧುವಿನೊಂದಿಗೆ ಗಾಜಿಪುರದಿಂದ ವಾರಣಾಸಿಗೆ ಪ್ರಯಾಣ ಬೆಳೆಸಿದ್ದರು. ಮದುವೆಯಲ್ಲಿ ವರನ ಕುಟುಂಬವನ್ನು ಸ್ವಾಗತಿಸಲಾಯಿತು ಹಾರ ಬದಲಾವಣೆ ಸಮಾರಂಭದ ಸಿದ್ಧತೆಗಳು ಪ್ರಾರಂಭವಾದವು. ಆದರೆ ಕಾರ್ ಕೊಡಲಿಲ್ಲವೆಂದು ವರ ಮದುವೆ ರದ್ದುಗೊಳಿಸಿ ಸ್ಥಳದಿಂದ ತೆರಳಿದ್ದ.

ಪೊಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ವಿಶಾಲ್ ಮತ್ತು ಅವರ ತಂದೆ ಸುರೇಂದ್ರ ಜೈಸ್ವಾಲ್ ಅವರ ಬೇಡಿಕೆಯ ಮೇರೆಗೆ ಬ್ಯಾಂಕ್ ಮೂಲಕ 6.5 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿರುವುದಾಗಿ ಅಜಯ್ ಜೈಸ್ವಾಲ್ ತಿಳಿಸಿದ್ದಾರೆ. ಅವರು ವರನ ಕುಟುಂಬಕ್ಕೆ 12 ಲಕ್ಷ ರೂಪಾಯಿ ನಗದು, ಚಿನ್ನದ ಸರ ಮತ್ತು ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ವರನ ಮನೆಯವರು ಕೊಟ್ಟ ಹಣವನ್ನೂ ಹಿಂದಿರುಗಿಸುತ್ತಿಲ್ಲ , ಮದುವೆಗೂ ಒಪ್ಪುತ್ತಿಲ್ಲ ಎಂದಿದ್ದಾರೆ.

ಮದುವೆಗೂ ಮನ್ನ ಇಷ್ಟೆಲ್ಲಾ ನೀಡಿದ ಬಳಿಕವೂ ವರ ಮದುವೆ ದಿನ ನನ್ನ ಮಗಳ ಬಳಿ ಕಾರ್ ಕೇಳಿದ್ದಾರೆ. ಆಕೆ ನನ್ನ ಬಳಿ ಬಂದು ವಿಷಯ ತಿಳಿಸಿದಾಗ, ತಕ್ಷಣವೇ ಕಾರನ್ನು ಒದಗಿಸುವುದು ಕಾರ್ಯಸಾಧ್ಯವಲ್ಲ ಎಂದು ನಾನು ವಿವರಿಸಿದೆ. ಅದಾಗ್ಲೂ ವರಮಾಲಾ ಕಾರ್ಯಕ್ರಮ ಮುಗಿದು ನಂತರದ ಆಚರಣೆಗಳ ಸಿದ್ಧತೆಗಳು ನಡೆಯುತ್ತಿದ್ದವು. ಈ ವೇಳೆ ವರ ವಿಶಾಲ್ ಕಾರ್ ನೀಡುವಂತೆ ಒತ್ತಾಯಿಸುತ್ತಲೇ ಇದ್ದ. ಇದು ನಮ್ಮಿಂದ ಸಾಧ್ಯವಿಲ್ಲವೆಂದು ಹೇಳಿದಾಗ, ಇದನ್ನು ಕೇಳಿದ ಅವರು ಮದುವೆಯನ್ನು ಮುಂದುವರಿಸಲು ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದರು. ವಿಶಾಲ್ ಮತ್ತು ಅವರ ಕುಟುಂಬವನ್ನು ಮನವೊಲಿಸಲು ಸಂಬಂಧಿಕರು ವ್ಯಾಪಕ ಪ್ರಯತ್ನಗಳನ್ನು ಮಾಡಿದರೂ, ಅವರು ಕಾರ್ ಪಡೆಯದೇ ಮದುವೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು ಎಂದು ಅಜಯ್ ಜೈಸ್ವಾಲ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...