ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು….. ಹೀಗೆ ಯಾರಿಗೆ ಬೇಕಾದರೂ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಕೆಲವೊಮ್ಮೆ ಅಸಮಂಜಸ ಪ್ರಶ್ನೆ ಕೇಳಿ ಅವಮಾನಕ್ಕೀಡಾಗುತ್ತಾರೆ. ಬಹುತೇಕ ಸಲ ಸುದ್ದಿಗೋಷ್ಠಿಯಲ್ಲಿಯೇ ಗಣ್ಯರು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗೆ, ಉಗಾಂಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಅಸಮಂಜಸ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯು ಪತ್ರಕರ್ತನಿಗೆ ಕವಣೆಯಿಂದ ಹೊಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
‘ಮ್ಯಾನ್ಸ್ ನಾಟ್ ಬ್ಯಾರಿ ರೌಕ್ಸ್’ ಎಂಬ ಟ್ವಿಟರ್ ಖಾತೆಯಿಂದ ಉಗಾಂಡ ಪೊಲೀಸ್ ಅಧಿಕಾರಿಯೊಬ್ಬರ ಫೋಟೊ ಟ್ವೀಟ್ ಮಾಡಲಾಗಿದೆ. ’ಇತ್ತೀಚೆಗೆ ನೇಮಕಗೊಂಡ ಉಗಾಂಡ ಪೊಲೀಸ್ ಅಧಿಕಾರಿಯು ಅಸಮಂಜಸ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಕವಣೆಯಿಂದ ಹೊಡೆದಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ಫೋಟೊದಲ್ಲಿ ಪೊಲೀಸ್ ಅಧಿಕಾರಿಯು ಕವಣೆ ಹಿಡಿದಿರುವುದರಿಂದ, ಅದರಲ್ಲೂ ಹೊಡೆಯುತ್ತಿರುವಂತೆ ಭಂಗಿ ಇರುವುದರಿಂದ ಎಲ್ಲರೂ ಇದನ್ನು ನಂಬಿದ್ದಾರೆ. ಅಲ್ಲದೆ, ಟ್ವೀಟ್‌ಗೆ 26 ಸಾವಿರ ಜನ ಲೈಕ್ ಮಾಡಿದ್ದಾರೆ, 10 ಸಾವಿರಕ್ಕೂ ಅಧಿಕ ರಿಟ್ವೀಟ್ ಆಗಿವೆ.
ಆದರೆ, ವಾಸ್ತವಾಂಶವೇ ಬೇರೆ ಇದೆ ಎಂದು ಹಲವು ಮಾಧ್ಯಮಗಳ ಕ್ರಾಸ್‌ಚೆಕ್‌ನಿಂದ ಬಯಲಾಗಿದೆ. ಟ್ವೀಟ್ ಮಾಡಲಾದ ಫೋಟೋವು ಕಳೆದ ವರ್ಷದ್ದಾಗಿದೆ. ಅಲ್ಲದೆ, ಉಗಾಂಡದ ಪೊಲೀಸ್ ಅಧಿಕಾರಿಯು ದಾಳಿ ವೇಳೆ ದುಷ್ಕರ್ಮಿಗಳಿಂದ ಸಿಕ್ಕ ಮಾರಕಾಸ್ತ್ರಗಳನ್ನು ಸುದ್ದಿಗಾರರಿಗೆ ತೋರಿಸಿದ್ದಾರೆ. ಈ ವೇಳೆ ಕವಣೆಯೂ ಸಿಕ್ಕಿದ್ದು, ಅದರ ಬಳಕೆ ಬಗ್ಗೆ ಸುದ್ದಿಗಾರರಿಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇದೇ ವೇಳೆ ತೆಗೆದ ಫೋಟೊಗಳನ್ನು ಈಗ ಹೊಡೆಯಲಾಗಿದೆ ಎಂಬ ರೀತಿಯಲ್ಲಿ ಬಿಂಬಿಸಿ ಟ್ವೀಟ್ ಮಾಡಲಾಗಿದೆ. ಹಾಗಾಗಿ ಟ್ವೀಟ್‌ನಲ್ಲಿ ಉಲ್ಲೇಖಿಸಿದಂತೆ ಪೊಲೀಸ್ ಅಧಿಕಾರಿಯು ಯಾರಿಗೂ ಹೊಡೆದಿಲ್ಲ ಎಂಬುದು ಸಾಬೀತಾಗಿದೆ.
https://twitter.com/AdvoBarryRoux/status/1502898390132269059?ref_src=twsrc%5Etfw%7Ctwcamp%5Etweetembed%7Ctwterm%5E1502898390132269059%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fdid-this-cop-really-hit-a-reporter-with-catapult-truth-behind-viral-pic-2821557