alex Certify ಅಭಿಮಾನಿಯ ಫೋನ್​ ಎಸೆದ್ರಾ ನಟ ರಣಬೀರ್ ಕಪೂರ್ ? ಇಲ್ಲಿದೆ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಯ ಫೋನ್​ ಎಸೆದ್ರಾ ನಟ ರಣಬೀರ್ ಕಪೂರ್ ? ಇಲ್ಲಿದೆ ಅಸಲಿ ಸತ್ಯ

ನಟ ರಣಬೀರ್ ಕಪೂರ್ ಅಭಿಮಾನಿಯೊಬ್ಬ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ ನಂತರ ಆತನ ಫೋನ್ ಅನ್ನು ಕಸಿದು ಎಸೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೆಲೆಬ್ರಿಟಿಯ ನಡವಳಿಕೆಯನ್ನು ಗಮನಿಸಿದ ಅನೇಕ ಜನರು ಆಘಾತಕ್ಕೊಳಗಾದರು ಮತ್ತು ಅದೇ ರೀತಿ ಅವರನ್ನು ಟೀಕಿಸಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ಪದೇ ಪದೇ ಫೋಟೋ ತೆಗೆಯುತ್ತಿದ್ದರಿಂದ ಬೇಸತ್ತ ನಟ ಫೋನ್​ ತೆಗೆದು ಎಸೆದಿರುವ ವಿಡಿಯೋ ವೈರಲ್​ ಆಗಿತ್ತು.

ಆದರೆ ಅಸಲಿಗೆ ಇದು ನಟನ ಕೋಪವಲ್ಲ, ಬದಲಿಗೆ ಇದರ ಸತ್ಯಾಂಶವೇ ಬೇರೆ. ನಿಜಕ್ಕೂ ಇದು ಪ್ರಚಾರದ ಸ್ಟಂಟ್ ಆಗಿದೆ. ವಿಡಿಯೋ ಹಿಂದಿನ ಸತ್ಯವನ್ನು ಸ್ಮಾರ್ಟ್‌ಫೋನ್ ಕಂಪೆನಿ ಒಪ್ಪೋ ಬಹಿರಂಗಪಡಿಸಿದೆ. ಅವರ ಟ್ವೀಟ್ ಪ್ರಕಾರ, ಇದು ಕಂಪನಿಯು ಬಳಸುವ ಮಾರ್ಕೆಟಿಂಗ್ ತಂತ್ರವಾಗಿದೆ. ವಿಡಿಯೋದ ತುಣುಕನ್ನು ಕಂಪೆನಿ ಶೇರ್​ ಮಾಡಿದೆ.

ಅಸಲಿಗೆ ಜಾಹೀರಾತಿನಲ್ಲಿ ರಣಬೀರ್ ಕಪೂರ್ ಹುಡುಗನಿಗೆ ಹೊಸ ಬಿಳಿ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ಕಾಣಬಹುದು. ಇದನ್ನು ಪೋಸ್ಟ್ ಮಾಡಿ, ಚಿಕ್ಕ ಹುಡುಗ ನಗುತ್ತಾ ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ನಂತರ, ನಟ ಚಿಕ್ಕ ಹುಡುಗನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇಡೀ ಆಕ್ಟ್ ಕಂಪನಿಯು ಬಿಡುಗಡೆ ಮಾಡಿದ ಹೊಸ ಸ್ಮಾರ್ಟ್‌ಫೋನ್ – Oppo Reno8 T5G ಅನ್ನು ಪ್ರಚಾರ ಮಾಡಲು ಬಳಸಲಾದ ಪ್ರಚಾರ ಅಭಿಯಾನವಾಗಿದೆ.

ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಪ್ರಚಾರ ಮಾಡಲು ಇದು ಒಂದು ಮಾರ್ಗವಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...