ಪ್ರತಿಭಟನಾನಿರತ ರೈತರ ನಡುವೆ ಟೆಂಟ್ ಒಂದರಲ್ಲಿ ಸಾರ್ವಜನಿಕರ ನಡುವೆ ನಿಂತಿದ್ದಾರೆ ಎಂದು ತೋರಲಾದ ಪಂಜಾಬ್ ರೆಜಿಮೆಂಟ್‌ನ ಯೋಧರೊಬ್ಬರ ಚಿತ್ರ ನಕಲಿಯಾದದ್ದು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ಕೊಟ್ಟಿದೆ.
ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ಯುನಿಟ್‌ನ ಯೋಧರಿಗೆ ಮಾಜಿ ಯೋಧರು ಚಹಾ ಕೂಟ ಏರ್ಪಡಿಸಿದ್ದಾಗಿನ ಚಿತ್ರ ಅದು ಎಂದು ಸೇನೆ ಸ್ಪಷ್ಟವಾಗಿ ತಿಳಿಸಿದೆ.
ಪೆಟ್ರೋಲ್, ಡೀಸೆಲ್ ಗ್ರಾಹಕರಿಗೆ ಗುಡ್ ನ್ಯೂಸ್: ದರ ಇಳಿಕೆ ಸಾಧ್ಯತೆ
“ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ವಿಡಿಯೋವೊಂದರಲ್ಲಿ ಭಾರತೀಯ ಸೇನೆಯ ಜವಾನರು ಸಾರ್ವಜನಿಕರ ನಡುವೆ ಟೆಂಟ್ ಒಂದರಲ್ಲಿ ನಿಂತಿದ್ದು, ರೈತರೊಂದಿಗೆ ಪಂಜಾಬ್ ರೆಜಿಮೆಂಟ್‌ನ ಕೆಲ ಯೋಧರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಇದು ಸುಳ್ಳು ಸುದ್ದಿ,” ಎಂದು ಸೇನಾಧಿಕಾರಿ ತಿಳಿಸಿದ್ದಾರೆ.
ಕೃಷಿ ಸುಧಾರಣೆ ಸಂಬಂಧ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿರುವ ಮೂರು ಕಾಯಿದೆಗಳ ವಿರುದ್ಧ ಉತ್ತರ ಭಾರತದ ಕೆಲವೆಡೆ ಕಳೆದ ವರ್ಷದಿಂದ ಪ್ರತಿಭಟನೆಗಳು ನಡೆಯುತ್ತಿವೆ.