ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ ಹೊರಡಲು ಉಚಿತ ರೈಲು ಟಿಕೆಟ್ ನೀಡಿತ್ತು. ಅದೇ ಸಮಯದಲ್ಲಿ, ದೆಹಲಿ ಸರ್ಕಾರವು ವಲಸೆ ಕಾರ್ಮಿಕರಿಗೆ ನಗರವನ್ನು ತೊರೆಯುವಂತೆ ಹೇಳಿ, ಅವರಿಗೆ ಬಸ್ಸುಗಳನ್ನು ಒದಗಿಸಿತು ಅದು ಕೇವಲ ಅರ್ಧದಾರಿಗೆ. ಇದರ ಪರಿಣಾಮವಾಗಿ, ಕೋವಿಡ್ ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವೇಗವಾಗಿ ಹರಡಿತು ಎಂದಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಕೂಲಿ ಕಾರ್ಮಿಕರನ್ನು ತೊರೆದರು. ಅವರಿಗೆ ಮನೆಗೆ ಮರಳಲು ದಾರಿಯೇ ಇರಲಿಲ್ಲ. ಅವರು ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿದ್ದರು. ಇಂತಾ ಸಂದರ್ಭದಲ್ಲಿ ಅವರಿಗೆ ಯಾರೂ ಸಹಾಯ ಮಾಡಬಾರದು ಎಂದು ಅವರು ಬಯಸಿದ್ದರೆ ? ಮೋದಿಜಿಗೆ ಏನು ಬೇಕಿತ್ತು ? ಅವರಿಗೆ ಏನು ಬೇಕು ? ಕೊರೋನಾ ನಡುವೆಯೇ ಮೋದಿ ಅವರು ನಡೆಸಿದ ಬೃಹತ್ ರ್ಯಾಲಿಗಳ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.
ವಿಡಿಯೋ: ಮೊಸಳೆಯೊಂದಿಗೆ ಸ್ಟೀವ್ ಇರ್ವಿನ್ ಪುತ್ರನ ಮೈನವಿರೇಳಿಸುವ ಸಾಹಸ
ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸರ್ಕಾರದ ಬಗ್ಗೆ ಪ್ರಧಾನಿ ಆರೋಪಗಳನ್ನು ತಳ್ಳಿಹಾಕಿದರು. ಸೋಮವಾರದ ಸಂಸತ್ತಿನಲ್ಲಿ ಪ್ರಧಾನಿ ನೀಡಿದ ಭಾಷಣದ ಕ್ಲಿಪ್ ಅನ್ನು ಹಂಚಿಕೊಂಡ ಕೇಜ್ರಿವಾಲ್, “ಪ್ರಧಾನಿಯವರ ಈ ಹೇಳಿಕೆ ಸಂಪೂರ್ಣ ಸುಳ್ಳು, ಕೊರೋನಾ ಅವಧಿಯಲ್ಲಿ ನೋವನ್ನು ಅನುಭವಿಸಿದವರಿಗೆ ಪ್ರಧಾನಿ ಸಂವೇದನಾಶೀಲರಾಗುತ್ತಾರೆ ಎಂದು ದೇಶ ಭಾವಿಸುತ್ತದೆ. ಎಷ್ಟೋ ಜನ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ಜನರ ಕಷ್ಟಗಳ ಬಗ್ಗೆ ರಾಜಕೀಯ ಮಾಡುವುದು ಪ್ರಧಾನಿಗೆ ಶೋಭೆ ನೀಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.