alex Certify ಡಾನ್ಸ್ ಇಂಡಿಯಾ ಡಾನ್ಸ್​ ಷೋನ ಪುಟಾಣಿ ಅರಾಧ್ಯಳ ನೃತ್ಯ ವೈರಲ್​: ಶ್ಲಾಘನೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಇಂಡಿಯಾ ಡಾನ್ಸ್​ ಷೋನ ಪುಟಾಣಿ ಅರಾಧ್ಯಳ ನೃತ್ಯ ವೈರಲ್​: ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳು ಏನು ಮಾಡಿದರೂ ಚೆಂದ. ಅದರಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಿದರೆ ಅದಕ್ಕೆ ಫಿದಾ ಆಗುವವರೇ ಹೆಚ್ಚು. ಅನೇಕ ಮಕ್ಕಳು ಈ ರೀತಿ ನೃತ್ಯ ಪ್ರದರ್ಶನ ನೀಡಿದರೂ, ಕೆಲವು ಮಾತ್ರ ಅದ್ಹೇಗೋ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ಒಂದು ವೈರಲ್​ ವಿಡಿಯೋ ಈಗ ಹಲವಾರು ಕಮೆಂಟ್​ಗಳೊಂದಿಗೆ ಶೇರ್​ ಆಗುತ್ತಿವೆ.

ಡಾನ್ಸ್ ಇಂಡಿಯಾ ಡಾನ್ಸ್​ ರಿಯಾಲಿಟಿ ಷೋದ ಐದನೇ ಕಂತಿನಲ್ಲಿ ಎರಡನೇ ರನ್ನರ್ ಅಪ್ ಆದ ಆದ್ಯಶ್ರೀಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಪುಟಾಣಿ ಆಂಗಿಕಾಭಿನಿಯದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾಳೆ. ಖುದ್ದು ದೊಡ್ಡ ದೊಡ್ಡ ಸ್ಟಾರ್​ಗಳೇ ಈಕೆಗೆ ಅಭಿನಂದನೆಗಳ ಸುರಿಮಳೆಗೈದಿದ್ದಾರೆ.

ಈಕೆಯ ಪುಟ್ಟದೊಂದು ಡಾನ್ಸ್​ ವಿಡಿಯೋ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ ಭಾರಿ ವೈರಲ್​ ಆಗಿದೆ. ನಟ್ವರ್‌ಲಾಲ್ ಚಿತ್ರದ ಪ್ರಸಿದ್ಧ ಹಾಡು ಪರ್ದೇಸಿಯಾ ಯೇ ಸಚ್ ಹೈ ಪಿಯಾ ಹಾಡಿಗೆ ಆರಾಧ್ಯಾ ನೃತ್ಯ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...