ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ‘ಸಿಂಗಲ್ ವೋಟ್ ಪಾರ್ಟಿ’ ಎಂಬ ಹ್ಯಾಷ್ ಟ್ಯಾಗ್ ಹಿಂದಿನ ಅಸಲಿಯತ್ತು ಬಯಲಾಗಿದೆ.
ಡಿ. ಕಾರ್ತಿಕ್ ಎಂಬಾತ ಇತ್ತೀಚೆಗೆ ತಮಿಳುನಾಡು ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಿಗೆ ಸಿಕ್ಕಿದ್ದು ಕೇವಲ ಒಂದೇ ಮತ ! ಹೌದು, ಅವರದ್ದೇ ಮತ ಮಾತ್ರವೇ ಅವರಿಗೆ ಸಿಕ್ಕಿದೆ. ಹಾಗಾದರೆ ಅವರ ಕುಟುಂಬಸ್ಥರು ಕೂಡ ಮತ ಹಾಕಲಿಲ್ಲವೇ?
ಇದೇ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಎದುರಾಳಿಗಳು ಹರಿಬಿಟ್ಟಿದ್ದಾರೆ. ಜತೆಗೆ ನಿಜಾಂಶ ಏನು ಎಂಬ ಕುತೂಹಲ ದೇಶದ ಹಲವರಲ್ಲಿ ಮನೆ ಮಾಡಿದೆ.
ಹಬ್ಬದ ದಿನವೇ ಘೋರ ಕೃತ್ಯ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿ ಮೇಲೆ ಫೈರಿಂಗ್ –ಇಬ್ಬರೂ ಸಾವು
ಆದರೆ, ಕುತೂಹಲಕ್ಕೆ ತೆರೆ ಎಳೆಯಲು ಖುದ್ದು ಕಾರ್ತಿಕ್ ಅವರೇ ಮುಂದಾಗಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಗೆ ಸ್ಪಷ್ಟನೆ ಕೊಟ್ಟಿರುವ ಅವರು, ’’ ಹೌದು, ನನಗೆ ಕೇವಲ ಒಂದೇ ವೋಟು ಅದು ಕೂಡ ನನ್ನದೇ ಮತ ಸಿಕ್ಕಿದೆ. ಆದರೆ ನಾನು ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಕಮಲ ಪಕ್ಷದಿಂದ ಸ್ಪರ್ಧಿಸಿರಲಿಲ್ಲ. ಪಕ್ಷೇತರ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೆ. ಕಾರಿನ ಚಿಹ್ನೆ ಕೊಟ್ಟಿದ್ದರು’’ ಎಂದಿದ್ದಾರೆ.
ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…!
ಅಲ್ಲಾರೀ ಸ್ವಾಮಿ, ನಿಮ್ಮ ಕುಟುಂಬಸ್ಥರ ಮತ ಏನಾಯ್ತು ಎಂಬ ಪ್ರಶ್ನೆಗೂ ಕಾರ್ತಿಕ್ ಹೇಳಿದ್ದು, ’’ ನಾನು ಸ್ಪರ್ಧೆಗೆ ನಿಂತಿದ್ದು 9ನೇ ವಾರ್ಡ್‌ನಲ್ಲಿ. ಬಿಜೆಪಿ ಮೈತ್ರಿ ಪಕ್ಷ ಎಐಎಡಿಎಂಕೆಯು 4ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಹಾಕಿತ್ತು. ಪರಿಣಾಮ ನನ್ನದೇ 4ನೇ ವಾರ್ಡ್ ತ್ಯಾಗ ಮಾಡಬೇಕಾಯ್ತು. ಅಲ್ಲಿಗೆ ಕುಟುಂಬಸ್ಥರು 4ನೇ ವಾರ್ಡ್ ನಲ್ಲೇ ಮತದಾನ ಮಾಡಿದರು. 9ನೇ ವಾರ್ಡಿನಲ್ಲಿ ಹೊಸ ಅಭ್ಯರ್ಥಿಯಾದ ನನಗೆ ಮತಗಳು ಸಿಗಲಿಲ್ಲ. ಬಿಜೆಪಿ ಬಾವುಟ ಹಿಡಿದು ಪ್ರಚಾರ ಕೂಡ ನಡೆಸಿರಲಿಲ್ಲ’’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಇನ್ನೊಂದು ಮಜಾ ವಿಚಾರ ಎಂದರೆ ಕಾರ್ತಿಕ್ ಅವರು ಪ್ರಚಾರಕ್ಕಾಗಿ ಮುದ್ರಿಸಿದ್ದು 1000 ಕರಪತ್ರಗಳಂತೆ. ಅದರಲ್ಲಿ 900 ಮನೆಯಲ್ಲೇ ಉಳಿದಿವೆಯಂತೆ.