ಬೆಂಗಳೂರು: ಪ್ರತಿಷ್ಠಿತ ಆಭರಣ ಮಳಿಗೆ ಜಾಯ್ ಅಲುಕ್ಕಾಸ್ ಮಳಿಗೆಗೆ ಗ್ರಾಹಕರಂತೆ ಬಂದ ಕಳ್ಳನೊಬ್ಬ ಡೈಮಂಡ್ ಉಂಗುರ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳನೊಬ್ಬ ಡುಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಡೈಮಂಡ್ ಉಂಗುರ ಕದ್ದು ಪರಾರಿಯಾಗಿದ್ದಾನೆ. ಸುಮಾರು 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕಳ್ಳತನವಾಗಿದೆ.
ಈ ಬಗ್ಗೆ ಜಾಯ್ ಅಲುಕ್ಕಾಸ್ ಮಳಿಗೆ ಸಿಬ್ಬಂದಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖದೀಮ ನಗರದ ಹಲವು ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.