ಜೈಪುರ: ರಾಜಸ್ಥಾನದ ಜೈಪುರದ ಹೋಟೆಲ್ ಕೊಠಡಿಯಿಂದ 2 ಕೋಟಿ ರೂ. ಮೌಲ್ಯದ ವಜ್ರಾಭರಣ ಕಳ್ಳತನವಾಗಿದೆ. ಶುಕ್ರವಾರ ಕುಟುಂಬ ಸಮೇತರಾಗಿ ಮದುವೆಗೆಂದು ತೆರಳಿದ್ದ ವೇಳೆ ಹೋಟೆಲ್ ಕೊಠಡಿಯಿಂದ 2 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣ ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬವು ಮುಂಬೈನಿಂದ ಜೈಪುರಕ್ಕೆ ಡೆಸ್ಟಿನೇಶನ್ ವೆಡ್ಡಿಂಗ್ನಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ ಜೈಪುರದ ಹೆಸರಾಂತ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದರು ಎಂದು ಜವಾಹರ್ ವೃತ್ತದ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರಾಧಾ ರಾಮನ್ ಹೇಳಿದ್ದಾರೆ.
ಈ ಸಂಬಂಧ ಕುಟುಂಬ, ಪೊಲೀಸರಿಗೆ ದೂರು ನೀಡಿದ್ದು, ಕಳ್ಳತನದ ಹಿಂದೆ ಹೋಟೆಲ್ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಾಕೆಂದರೆ, ಕೀ ಇಲ್ಲದೆ ಕೊಠಡಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಹೋಟೆಲ್ ಸಿಬ್ಬಂದಿಗಳು ಕೀ ಕೊಡದೇ ಇದ್ದಲ್ಲಿ ಅಪರಿಚಿತರು ಅದು ಹೇಗೆ ಕೋಣೆಗೆ ಪ್ರವೇಶಿಸುತ್ತಾರೆ ಎಂಬುದು ಕುಟುಂಬದ ಆರೋಪವಾಗಿದೆ.
ಇನ್ನು ಹೋಟೆಲ್ನಲ್ಲಿ ಅಡಗಿರುವ ಅಪರಿಚಿತರ ವಿರುದ್ಧ ಯಾಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕುಟುಂಬಸ್ಥರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೋಟೆಲ್ ಉದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.