ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಕೆಲವು ಆಹಾರಗಳು ಇಲ್ಲಿವೆ ನೋಡಿ.
ಮೊದಲನೆಯದಾಗಿ ಕಡಲೆ ಮಧುಮೇಹಿಗಳಿಗೆ ಅತ್ಯುತ್ತಮ ತಿನಿಸು. ಇದನ್ನು ಹಸಿಯಾಗಿ ಅಥವಾ ನೆನೆಸಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್ ಗಳು ಲಭ್ಯವಾಗುವುದು ಮಾತ್ರವಲ್ಲ, ಸಕ್ಕರೆ ಪ್ರಮಾಣವೂ ನಿಯಂತ್ರಣದಲ್ಲಿ ಇರುತ್ತದೆ. ಹುರಿದ ಕಡಲೆಯನ್ನು ಸದಾ ನಿಮ್ಮೊಟ್ಟಿಗೆ ಇಟ್ಟುಕೊಂಡಿರಿ. ಹಸಿವಾದಾಗ ನಾಲ್ಕಾರು ಕಡಲೆಯನ್ನು ಬಾಯಿಗೆ ಹಾಕಿಕೊಳ್ಳಿ.
ಹಣ್ಣು ಮತ್ತು ಸಲಾಡ್ ಗಳ ಸೇವನೆಯೂ ಸಕ್ಕರೆ ಅಂಶ ನಿಯಂತ್ರಣಕ್ಕೆ ಸಹಕಾರಿ. ಹಾಗೆಂದು ಎಲ್ಲಾ ಹಣ್ಣುಗಳು ಒಳ್ಳೆಯದಲ್ಲ. ಚಿಕ್ಕು, ಮಾವು ಮೊದಲಾದ ಸಕ್ಕರೆ ಪ್ರಮಾಣ ಹೆಚ್ಚಿರುವ ಹಣ್ಣುಗಳನ್ನು ದೂರವಿಡಿ. ವೈದ್ಯರ ಬಳಿ ಕೇಳಿ ತಿನ್ನಬಹುದಾದ ಹಣ್ಣುಗಳನ್ನು ತಂದಿಟ್ಟುಕೊಳ್ಳಿ.
ತರಕಾರಿಗಳಲ್ಲೂ ಅಷ್ಟೇ, ಫೈಬರ್, ಜೀವಸತ್ವ ಮತ್ತು ಖನಿಜಗಳು ಹೇರಳವಾಗಿರುವ ವಸ್ತುಗಳನ್ನು ಸೇವಿಸಿ. ಸೌತೆಕಾಯಿ, ಕ್ಯಾರೆಟ್ ಸೇವನೆ ಮಧುಮೇಹಿಗಳಿಗೆ ಒಳ್ಳೆಯದು.
ಡ್ರೈ ಫ್ರುಟ್ ನಿತ್ಯ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ದೇಹ ತೂಕವನ್ನೂ ಇದು ನಿಯಂತ್ರಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಒಣಹಣ್ಣುಗಳನ್ನು ಸೇವಿಸಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.