ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಸಮಸ್ಯೆ ಕಾಡುತ್ತದೆ. ಈ ಮಧುಮೇಹ ಸಮಸ್ಯೆಯನ್ನು ಆಹಾರಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲವರು ಹಸಿವಾಗುವಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಸಕ್ಕರೆ ಮಟ್ಟ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಲ್ಬಣಗೊಳ್ಳಬಹುದು. ಹಾಗಾಗಿ ಮಧುಮೇಹಿಗಳು ಹಸಿವಾದಾಗ ಹಸಿವನ್ನು ತಣ್ಣಗಾಗಿಸಲು ಈ ಆಹಾರಗಳನ್ನು ಸೇವಿಸಿ.
*ಮೊಸರು : ಮಧುಮೇಹಿಗಳು ಹಸಿವಾದಾಗ ಮೊಸರನ್ನು ಸೇವಿಸಿ. ಇದು ಪ್ರೋಟೀನ್ ನಿಂದ ತುಂಬಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ, ಪೊಟ್ಯಾಶಿಯಂ , ಸತು ಸಮೃದ್ಧವಾಗಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಹಸಿವನ್ನು ನೀಗಿಸುತ್ತದೆ.
*ಆಪಲ್ : ಇದು ಕಡಿಮೆ ಕ್ಯಾಲೋರಿ, ಕರಗಬಲ್ಲ ಪೈಬರ್ ನ್ನು ಹೊಂದಿದೆ. ಇದು ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಶಿಯಂ, ಕ್ಯಾಲ್ಸಿಯಂನ್ನು ಹೊಂದಿದೆ. ಇದು ಹಸಿವನ್ನು ನೀಗಿಸುತ್ತದೆ.
*ಪಾಪ್ ಕಾರ್ನ್ : ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಗ್ಲೂಕೋಸನ್ನು ರಕ್ತಕ್ಕೆ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದು ಫೈಬರ್, ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತದೆ.