ಬದಲಾದ ಜೀವನಶೈಲಿ, ಆಹಾರದಿಂದ ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅತಿಯಾದರೆ ಜೀವಕ್ಕೆ ಆಪತ್ತು. ಹಾಗಾಗಿ ಈ ಕಾಯಿಲೆಯನ್ನು ಗುರುತಿಸಿ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮ. ಈ ಮಧುಮೇಹ ಸಮಸ್ಯೆಯನ್ನು ಈ ಚರ್ಮದ ಸಮಸ್ಯೆಗಳಿಂದ ಗುರುತಿಸಬಹುದು.
*ಮಧುಮೇಹ ಸಮಸ್ಯೆ ಇರುವವರಿಗೆ ಪದೇ ಪದೇ ಚರ್ಮದ ಸೋಂಕು ಕಾಡುತ್ತಿರುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ ಮತ್ತು ದದ್ದುಗಳು ಕಂಡು ಬರುತ್ತದೆ.
*ಮಧುಮೇಹಿಗಳಿಗೆ ಕೈಕಾಲು, ಬಾಯಿಗಳಲ್ಲಿ ಗುಳ್ಳೆಗಳು ಮೂಡುತ್ತವೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ.
*ಕುತ್ತಿಗೆ, ಸೊಂಟಗಳಲ್ಲಿ ಇದ್ದಕ್ಕಿದ್ದಂತೆ ಗಾಢವಾದ ಕಪ್ಪು ತೇಪೆಗಳು ಮೂಡುತ್ತವೆ. ಹಾಗಿದ್ದಾಗ ವೈದ್ಯರ ಬಳಿ ಹೋಗುವುದು ಅವಶ್ಯಕವಾಗಿದೆ.
*ಮಧುಮೇಹಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಚರ್ಮವು ತುಂಬಾ ಗಟ್ಟಿಯಾಗುತ್ತದೆ. ಮತ್ತು ಚರ್ಮ ಊತದ ಸಮಸ್ಯೆ ಕಂಡು ಬರುತ್ತದೆ.
*ಕಣ್ಣುಗಳು ಮತ್ತು ಕಣ್ಣಿನ ರೆಪ್ಪೆಯ ಸುತ್ತಲೂ ಹಳದಿಗಟ್ಟಿರುತ್ತದೆ. ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಕಂಡು ಬಂದಾಗ ಕಣ್ಣಿನ ರೆಪ್ಪೆಗಳ ಸುತ್ತ ಹಳದಿ ಬಣ್ಣ ಮೂಡುತ್ತದೆ.
*ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಚರ್ಮದ ಮೇಲಾದ ಗಾಯಗಳು ಗುಣಪಡಿಸುವುದು ಕಷ್ಟವಾಗುತ್ತದೆ. ಗಾಯಗಳು ಕೆಲವೊಮ್ಮೆ ವಾಸಿಯಾಗದೆ ಕೊಳೆತು ಹೋಗಲು ಶುರುವಾಗುತ್ತದೆ.