ಮೈಸೂರಿನ ಚಾಮುಂಡೇಶ್ವರಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಇತ್ತೀಚೆಗೆ ಅನಾವರಣಗೊಂಡ ಮಹೇಂದ್ರ ಸಿಂಗ್ ಧೋನಿ ಅವರ ಮೇಣದ ಪ್ರತಿಮೆಯು ಅವರ ಅಭಿಮಾನಿಗಳ ಹೃದಯ ಕರಗಿಸಿದೆ. ಆದರೆ ನೆಟ್ಟಿಗರು ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಈಗ ವೈರಲ್ ಆಗಿರುವ ಫೋಟೋವನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದು ಧೋನಿ ರೀತಿ ಇಲ್ಲ ನಿಮಗೆ ಹಾಗೆ ಕಾಣಿಸಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇದು ರಣಬೀರ್ ಕಪೂರ್ ಪ್ರತಿಮೆ ಎಂದು ಕಿಂಡಲ್ ಮಾಡಿದ್ದಾರೆ.
ಇದು ಶೋಯಿಬ್ ಎಂದು ಇನ್ನೊಬ್ಬ ಟ್ವೀಟಿಗ ಕಾಮೆಂಟ್ ಮಾಡಿದ್ದು, ಇದು ರಣಬೀರ್ ಮತ್ತು ಧೋನಿಯ ಪ್ರತಿಮೆಯನ್ನು ಒಟ್ಟಾಗಿ ಸಿದ್ಧಪಡಿಸಲಾಗಿದೆಯಾ ಎಂದು ಹಾಸ್ಯ ಮಾಡಿದ್ದಾರೆ.