ಚಂಡೀಗಢದ ರತನ್ ಧಿಲ್ಲೋನ್ ಅವರಿಗೆ 26 ವರ್ಷಗಳ ಹಿಂದೆ ಅವರ ಕುಟುಂಬದವರು ಖರೀದಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್‌ನ ಹಳೆಯ ಷೇರುಗಳು ಸಿಕ್ಕಿವೆ. ಈ ಷೇರುಗಳನ್ನು 1998ರಲ್ಲಿ ತಲಾ 10 ರೂಪಾಯಿಗೆ ಖರೀದಿಸಲಾಗಿತ್ತು. ಆದ್ರೆ, ರತನ್ ಅವರಿಗೆ ಷೇರು ಮಾರುಕಟ್ಟೆಯ ಬಗ್ಗೆ ಯಾವುದೇ ಜ್ಞಾನವಿಲ್ಲ. ಹೀಗಾಗಿ, ಈ ಷೇರುಗಳನ್ನು ಏನು ಮಾಡಬೇಕು ಅಂತಾ ಅವರಿಗೆ ಗೊತ್ತಾಗ್ತಿಲ್ಲ.
ಅವರು ಈ ಷೇರುಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಕೇಳಿದಾಗ, ಅನೇಕರು ಈ ಷೇರುಗಳನ್ನು ಡಿಜಿಟಲೀಕರಣ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಆದ್ರೆ, ಡಿಜಿಟಲೀಕರಣ ಪ್ರಕ್ರಿಯೆ ತುಂಬಾ ಕಷ್ಟಕರವಾಗಿದೆ ಎಂದು ರತನ್ ಹೇಳಿದ್ದಾರೆ. ಇದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸುವುದು ಕೂಡಾ ಕಷ್ಟವಾಗಿದೆ. ಹೀಗಾಗಿ, ಅವರು ಈ ಷೇರುಗಳನ್ನು ಡಿಜಿಟಲೀಕರಣ ಮಾಡುವ ಆಲೋಚನೆಯನ್ನು ಕೈಬಿಟ್ಟಿದ್ದಾರೆ.
“ಧೀರೂಭಾಯಿ ಅಂಬಾನಿ ಅವರ ಸಹಿ ಇರುವ ಈ ಷೇರುಗಳನ್ನು ಡಿಜಿಟಲೀಕರಣ ಮಾಡದೇ ಇರುವುದು ನನಗೆ ಬೇಸರ ತರಿಸಿದೆ. ಆದ್ರೆ, ಇದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ಹೀಗಾಗಿ, ನಾನು ಈ ಆಲೋಚನೆಯನ್ನು ಕೈಬಿಟ್ಟಿದ್ದೇನೆ” ಎಂದು ರತನ್ ಹೇಳಿದ್ದಾರೆ.
ಆದ್ರೆ, ಅನೇಕರು ರತನ್ ಅವರಿಗೆ ಈ ಷೇರುಗಳ ಬೆಲೆ ತುಂಬಾ ಹೆಚ್ಚಾಗಿರಬಹುದು ಎಂದು ಹೇಳಿದ್ದಾರೆ. ಈ ಷೇರುಗಳನ್ನು ಡಿಜಿಟಲೀಕರಣ ಮಾಡಿಕೊಂಡರೆ, ಕೋಟ್ಯಂತರ ರೂಪಾಯಿ ಸಿಗಬಹುದು ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಇನ್ವೆಸ್ಟರ್ ಎಜುಕೇಶನ್ ಅಂಡ್ ಪ್ರೊಟೆಕ್ಷನ್ ಫಂಡ್ ಅಥಾರಿಟಿ (IEPFA) ಕೂಡಾ ರತನ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಆದ್ರೆ, ರತನ್ ಅವರು ಈ ಷೇರುಗಳನ್ನು ಡಿಜಿಟಲೀಕರಣ ಮಾಡಿಕೊಳ್ಳುತ್ತಾರಾ? ಇಲ್ಲವಾ? ಅನ್ನೋದು ಇನ್ನೂ ಗೊತ್ತಾಗಿಲ್ಲ.
We found these at home, but I have no idea about the stock market. Can someone with expertise guide us on whether we still own these shares?😅@reliancegroup pic.twitter.com/KO8EKpbjD3
— Rattan Dhillon (@ShivrattanDhil1) March 11, 2025