
ಪವನ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ‘ಧೀರ ಸಾಮ್ರಾಟ್’ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಸಿನಿಮಾದಲ್ಲಿ ರಾಕೇಶ್ ಬಿರಾದರ್ ನಾಯಕ ನಟನಾಗಿದ್ದು, ಅವರಿಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಬಾಲರಾಜ್ವಾಡಿ, ಸೇರಿದಂತೆ ನಾಗೇಂದ್ರ ಯು ಆರ್, ಎಸ್ ಯತಿರಾಜ್, ರವೀಂದ್ರನಾಥ್, ಹರೀಶ್ ಅರಸು, ರಮೇಶ್ ಭಟ್, ಶೋಭರಾಜ್, ಮಂಡ್ಯ ಚಂದ್ರು, ಮನಮೋಹನ್ ರಾಯ್, ಮತ್ತು ಇಂಚರ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ತನ್ವಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಗುರುಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಾಘವ್ ಸುಭಾಷ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸತೀಶ್ ಚಂದ್ರ ಸಂಕಲನ, ಅರುಣ್ ಸುರೇಶ್ ಛಾಯಾಗ್ರಹಣವಿದೆ. ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.