ಧೆಂಕನಲ್: ವಿವಾಹೇತರ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿರುವ ಮತ್ತೊಂದು ಭೀಕರ ಘಟನೆ ನಡೆದಿದೆ. ಬಂಧಿತನಾಗುವ ಮೊದಲು ಆ ವ್ಯಕ್ತಿ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ ಸುಮಾರು 12 ಕಿಲೋಮೀಟರ್ ದೂರ ನಡೆದನು.
ಒಡಿಶಾದ ಧೆಂಕನಲ್ ಜಿಲ್ಲೆಯ ಗಾಂಡಿಯಾ ಪೊಲೀಸ್ ವ್ಯಾಪ್ತಿಯ ಚಂದ್ರಶೇಖರ್ ಪುರ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಪರ ಪುರುಷನ ಜೊತೆಗಿನ ಅನೈತಿಕ ಸಂಬಂಧದ ಶಂಕೆಯ ಮೇಲೆ ಆರೋಪಿ ತನ್ನ ಹೆಂಡತಿಯ ತಲೆಯನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ. ಪತ್ನಿಯನ್ನು ಕೊಂದ ನಂತರ, ಅವಳ ತಲೆಯನ್ನು ಕತ್ತರಿಸಿ 12 ಕಿಲೋಮೀಟರ್ ನಡೆದ ನಂತರ ಜಂಘೀರಾದಲ್ಲಿ ಸ್ಥಳೀಯರು ತಡೆದರು. ಪತ್ನಿಯ ತಲೆಯೊಂದಿಗೆ ವ್ಯಕ್ತಿಯನ್ನು ಕಂಡ ಸ್ಥಳೀಯರು ಕೂಡಲೇ ಆತನನ್ನು ತಡೆದು ಜಂಘೀರಾ ಸದರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಗಾಂಡಿಯಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕ್ರೂರ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನಕಾಫೋಡಿ ಮಾಝಿ ಮತ್ತು ಮೃತ ದುರ್ದೈವಿ ಸುಚಲಾ ಮಾಝಿ ಎಂದು ಪೊಲೀಸರು ಗುರುತಿಸಿದ್ದಾರೆ.