ಧಾರವಾಡ: ಜೇನು ದಾಳಿಯಿಂದ ರೈತರೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ಸಮೀಪ ನಡೆದಿದೆ.
ಗಂಗಪ್ಪ ಚನ್ನಬಸಪ್ಪ ಕುಂದಗೋಳ(65) ಮೃತಪಟ್ಟ ರೈತ. ಅವರೊಂದಿಗಿದ್ದ ಸುಭಾಷ್ ಬಸಪ್ಪ ಹೋಳಿ ಎಂಬುವರು ಕೂಡ ಜೇನು ದಾಳಿಯಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳದ ಬೆನಕನಹಳ್ಳಿ ಮಾರ್ಗದಲ್ಲಿರುವ ಹೊಲದಲ್ಲಿ ಎತ್ತುಗಳನ್ನು ಕಟ್ಟುವಾಗ ಜೇನು ಹುಳಗಳು ದಾಳಿ ಮಾಡಿ ಕಚ್ಚಿವೆ. ಇದರಿಂದಾಗಿ ಗಂಗಪ್ಪ ಮೃತಪಟ್ಟಿದ್ದಾರೆ. ಕುಂದಗೋಳ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.