ಧಾರವಾಡ: ಸ್ಪಾ ಯುವತಿಯೊಂದಿಗೆ ಅನುಚಿತ ವರ್ತನೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನೋರ್ವನನ್ನು ಧಾರವಾಡ ವಿದ್ಯಾಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಚಿವ ವಿನಯ್ ಕುಲ್ಕರ್ಣಿ ಆಪ್ತ, ಕಾಂಗ್ರೆಸ್ ಮುಖಂಡ ಮನೋಜ್ ಕರ್ಜಗಿ ವಶಕ್ಕೆ ಪಡೆದ ಆರೋಪಿ. ಸ್ಪಾ ಮಾಲೀಕನೂ ಆಗಿರುವ ಮನೋಜ್ ಕರ್ಜಗಿ ಅಲ್ಲಿನ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಸ್ಪಾದಲ್ಲಿಯೇ ಈ ಘಟನೆ ನಡೆದಿದ್ದು, ಯುವತಿ ಮಾಲೀಕನ ಕಿರುಕುಳದಿಂದ ಬೇಸತ್ತು ಕೂಗಾಡುತ್ತಾ ಹೊರಗೋಡಿ ಬಂದಿದ್ದಾಳೆ ಎನ್ನಲಾಗಿದೆ. ಯುವತಿ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದೂರು ದಾಖಲಿಸಿದ್ದು, ಕಾಂಗ್ರೆಸ್ ಮುಖಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.