ಧಾರವಾಡ: ಇ.ಡಿ.ಸಿ.ಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಜಿಲ್ಲೆಯ 07 ಕರ್ನಾಟಕ ಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಆನ್ಲೈನ ಮೂಲಕ 81 ಅರ್ಜಿಗಳನ್ನು ಸ್ವೀಕರಿಸಲಾಗಿರುತ್ತದೆ.
ಪ್ರಾಂಚೈಸಿ ಆಯ್ಕೆಗಾಗಿ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತ್ತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ, ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟಡದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ ಡಿವೈಸ್ ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆ ಹಾಗೂ ಈಗಾಗಲೇ ಸರಕಾರದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಒನ್ ಕೇಂದ್ರದಿಂದ ಅಂತರ 2 ಕಿ.ಮೀ ಹಾಗೂ ಅರ್ಜಿದಾರರು ಕೇಂದ್ರವನ್ನು ಸ್ಥಾಪಿಸಲು ಒಂದಕ್ಕಿಂತ ಹೆಚ್ಚು ಸ್ಥಳಗಳನ್ನು ಗುರುತಿಸಿದಲ್ಲಿ ಜಿಲ್ಲಾ ಕಾರ್ಯಪಡೆಯ ನಿರ್ಣಯ ಅಂತಿಮ ಇರುವ ಮಾನದಂಡವಿರುತ್ತದೆ.
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ 07 ಕರ್ನಾಟಕ ಒನ್ ಫ್ಯಾಂಚೈಸಿಗಳ ಪರಿಶೀಲನಾ ಪಟ್ಟಿ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಹಾಗೂ ಸಂಬಂಧಿಸಿದ ತಹಶೀಲದಾರ ಹಾಗೂ ನಗರ ಸ್ಥಳೀಯ ಸಂಸ್ಥೆ ಕಾರ್ಯಾಲಯಗಳಲ್ಲಿ ಲಭ್ಯವಿದ್ದು, ಇದಕ್ಕೆ ಯಾರಿಂದಲಾದರೂ ತಕರಾರು, ಆಕ್ಷೇಪಣೆ ಇದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 13 ರಿಂದ 19 ರೊಳಗಾಗಿ ಲಿಖಿತ ತಕರಾರು, ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ನಂತರ ಬಂದ ಯಾವುದೇ ರೀತಿಯ ತಕರಾರು, ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿ ಅಂತಿಮಗೊಳಿಸಿದ ನಂತರ ಬಾಕಿ ಉಳಿದ ಫ್ಯಾಂಚೈಸಿಗಳ ಆಯ್ಕೆಗಾಗಿ ಮರು ಅರ್ಜಿ ಸಲ್ಲಿಸಲು ಇ.ಡಿ.ಸಿ.ಎಸ್. ವೆಬ್ಸೈಟ್ನಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.
ಫ್ರಾಂಚೈಸಿ ಆಯ್ಕೆಗಾಗಿ ಮಾನದಂಡಗಳು ಮತ್ತು ಕರ್ನಾಟಕ ಒನ್ ಕೇಂದ್ರಗಳ ಸ್ಥಾಪನೆಗಾಗಿ ವಿವರಗಳನ್ನು ಜಿಲ್ಲಾಧಿಕಾರಿಗಳ ಕಾಯಾಲಯಕ್ಕೆ ಭೇಟಿ ನೀಡಿ ಅಥವಾ ದೂ.ಸಂ:2233880, ಮೊ.ಸಂ:7259345654 ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.