ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಒಂದು ಅವರ ಅಭಿಮಾನಿಗಳ ಹುಬ್ಬೇರಿಸಿದೆ. ವರ್ಕ್ ಔಟ್ ಮಾಡುತ್ತಾ ಹಾಗೇ ಗೋಧಿ ರುಬ್ಬುವ ಅವರ ವಿಡಿಯೋ ನೆಟ್ಟಿಗರಿಗೆ ಭಾರೀ ಫನ್ನಿ ಎನಿಸಿದೆ.
86 ವರ್ಷದ ಹಿರಿಯ ನಟ ಸೈಕ್ಲಿಂಗ್ ವ್ಯಾಯಾಮ ಮಾಡುತ್ತಾ ಹಿಟ್ಟು ರುಬ್ಬುತ್ತಿರುವುದನ್ನು ನೋಡಬಹುದಾಗಿದೆ. ಬಿಳಿ ಬಣ್ಣದ ಟ್ರಾಕ್ ಸೂಟ್ ಧರಿಸಿದ ಧಮೇಂದ್ರ ತಮ್ಮ ವ್ಯಾಯಾಮದ ಸೈಕಲ್ ಮೇಲೆ ಭಾರೀ ಉಲ್ಲಾಸದಿಂದ ವರ್ಕ್ಔಟ್ ಮಾಡುತ್ತಿದ್ದಾರೆ. ಈ ಆವಿಷ್ಕಾರೀ ವರ್ಕ್ಔಟ್ ಹಿಂದಿನ ಐಡಿಯಾವನ್ನು ಧರ್ಮೇಂದ್ರ ಇದೇ ವೇಳೆ ವಿವರಿಸಿದ್ದಾರೆ.
ಇದೇ ವೇಳೆ ಶೋಲೆ ಚಿತ್ರದ ತಮ್ಮ ಜನಪ್ರಿಯ ಡೈಲಾಗ್ ಅನ್ನೂ ಧರ್ಮೇಂದ್ರ ಉದ್ಗರಿಸಿದ್ದಾರೆ. “ರುಬ್ಬುತ್ತಿರುವೆ…. ಸೈಕ್ಲಿಂಗ್ ಸೈಕ್ಲಿಂಗ್ ಸೈಕ್ಲಿಂಗ್ ಮತ್ತು ಗೋಧಿ ರುಬ್ಬುವುದು….. ಮತ್ತು ರುಬ್ಬುವುದು….. ಮತ್ತು ರುಬ್ಬುವುದು….. ಹಹ್ಹಾ” ಎಂದು ಡೈಲಾಗ್ ಹೊಡೆದಿದ್ದಾರೆ ಧರ್ಮೇಂದ್ರ.
ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಧರ್ಮೇಂದ್ರ ಪುತ್ರಿ ಈಶಾ ಡಿಯೋಲ್ ಸಹ ಅದಕ್ಕೆ ಪ್ರತಿಕ್ರಿಯಿಸಿ, “ನಿಮಗೆ ಇದು ಇಷ್ಟವಾಯಿತು ಎಂದು ತಿಳಿದು ಬಹಳ ಖುಷಿಯಾಯಿತು. ಲವ್ ಯೂ,” ಎಂದಿದ್ದಾರೆ.