ಭಾರತದ ಅತಿ ಎತ್ತರದ ಮನುಷ್ಯ ಎಂದು ದಾಖಲೆ ಬರೆದಿರುವ ಧರ್ಮೇಂದ್ರ ಪ್ರತಾಪ್ ಸಿಂಗ್ ರಾಜಕೀಯ ಪ್ರವೇಶ ಮಾಡಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಕಣಕ್ಕಿಳಿದಿರುವ ಧರ್ಮೇಂದ್ರ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಶನಿವಾರ(ಜನವರಿ 22) ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಧರ್ಮೇಂದ್ರ ಅವರು ಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಸಮಾಜವಾದಿ ಪಕ್ಷಕ್ಕಿರುವ ಆಲೋಚನೆ, ಪಕ್ಷದ ನೀತಿಗಳು ಹಾಗೂ ಅಖಿಲೇಶ್ ಯಾದವ್ ಅವರ ನಾಯಕತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದಿರುವ ಧರ್ಮೇಂದ್ರ ಪಕ್ಷದ ಸದಸ್ಯತ್ವ ಪಡೆದಿದ್ದಾರೆ.
BREAKING NEWS: KSRTC ಬಸ್ ಡಿಕ್ಕಿ; ಇಬ್ಬರು ಸಾವು; 10 ಪ್ರಯಾಣಿಕರಿಗೆ ಗಾಯ
8.2 ಅಡಿ ಎತ್ತರ ಇರುವ ಧರ್ಮೇಂದ್ರ ಪ್ರತಾಪ್ ಸಿಂಗ್ ಅವ್ರು ಭಾರತ ಅತ್ಯಂತ ಎತ್ತರದ ಮನುಷ್ಯ ಎಂದು ಗಿನ್ನಿಸ್ ದಾಖಲೆ ಬರೆದಿದ್ದಾರೆ. ಉತ್ತರ ಪ್ರದೇಶದ, ಪ್ರತಾಪಘಡ ಜಿಲ್ಲೆಯ, ನರ್ಹಾಪುರ ಕಸಿಯಾಹಿ ಗ್ರಾಮದ 46 ವರ್ಷದ ಧರ್ಮೇಂದ್ರ ಅವ್ರನ್ನ ಏಷ್ಯಾದ ಎತ್ತರದ ಮನುಷ್ಯರಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಅಥವಾ ಚುನಾವಣಾ ಫಲಿತಾಂಶ ಮಾರ್ಚ್ ಹತ್ತನೇ ತಾರೀಖಿನಂದು ನಡೆಯಲಿದೆ.