ಧಾರವಾಡ: ಏಕಾಏಕಿ ಓಡಿಬಂದು ಬಸ್ ಚಕ್ರದಡಿ ಮಲಗಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ವೊಂದು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಏಕಾಏಕಿ ವ್ಯಕ್ತಿಯೊಬ್ಬ ಬಸ್ ನ ಹಿಂದಿನ ಚಕ್ರದಡಿ ಮಲಗಿದ್ದಾನೆ. ಬಸ್ ವ್ಯಕ್ತಿಯ ಮೇಲೆ ಹರಿದುಹೋಗಿದೆ. ಆರಂಭದಲ್ಲಿ ಬಸ್ ಪಾದಚಾರಿ ಮೇಲೆ ಹರಿದಿದೆ ಎಂದು ಹೇಳಲಾಗಿತ್ತು. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ವ್ಯಕ್ತಿ ತಾನೇ ಬಸ್ ನಡಿ ಮಲಗಿ ಆತ್ಮಹತ್ಯೆ ಮಡಿಕೊಂಡಿರುವುದು ದೃಢವಾಗಿದೆ.
ಪ್ರಕರಣವನ್ನು ಧಾರವಾಡ ಉಪನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವ್ಯಕ್ತಿ ಯಾರು? ಆತ್ಮಹತ್ಯೆಗೆ ನಿಖರ ಕಾರಣವೇನು ತಿಳಿದುಬಂದಿಲ್ಲ.