ಧಾರವಾಡ: ಧಾರವಾಡದಲ್ಲಿ ಬರೋಬ್ಬರಿ 18 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಹಣ ಉದ್ಯಮಿ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಮನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಧಾರವಾಡದ ಅಪಾರ್ಟ್ ಮೆಂಟ್ ಒಂದರಲ್ಲಿ ಅಕ್ರಮ ಮದ್ಯ ಹಾಗೂ ಹಣ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮದ್ಯದ ಬಾಟಲಿಗಳ ಜೊತೆ ಬರೋಬ್ಬರಿ 18 ಕೋಟಿ ಹಣ ಪತ್ತೆಯಾಗಿದೆ. ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ್ ದತ್ತುನ್ನವರ್ ಎಂಬುವವರ ಮನೆಯಲ್ಲಿ ಈ ಹಣ ಸಿಕ್ಕಿದ್ದು, ಬಸವರಾಜ್ ವೃತ್ತಿಯಲ್ಲಿ ವಕೀಲರೂ ಆಗಿದ್ದು, ಕಲಘಟಗಿ ಮೂಲದವರು ಎನ್ನಲಾಗಿದೆ.
18 ಕೋಟಿಯಷ್ಟು ಬೃಹತ್ ಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಐಟಿ ಇಲಾಖೆಗೆ ವರ್ಗಾಯಿಸಲಾಗಿದೆ. ಅಲ್ಲದೇ ಹಣವನ್ನು ಧಾರವಾಡದಿಂದ ಹುಬ್ಬಳ್ಳಿಯ ಕೇಶ್ವಾಪುರ ಎಸ್ ಬಿಐ ಬ್ಯಾಂಕ್ ಗೆ ತಂದಿರುವ ಅಧಿಕಾರಿಗಳು ಐಟಿ ಖಾತೆಗೆ ಹಣ ಜಮೆ ಮಾಡಿದ್ದಾರೆ. ಇನ್ನು ಬಸವರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.