ಧಾರವಾಡ: ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧಾರವಾಡ ಐಐಟಿ ನೂತನ ಕಟ್ಟಡ, ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಅವರು ಮಾತನಾಡಿ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನಿರ್ಮಾಣದ ಕಂಪನಿಯ ಸಿಇಓಗೆ ತಿಳಿಸಲಾಗಿದೆ ಎಂದರು.
ಪ್ರಧಾನಿಯವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಶಾಸಕರಾದ ಅಮೃತ ದೇಸಾಯಿ, ಚಂದ್ರಕಾಂತ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಐಐಟಿಯ ನೂತನ ನಿರ್ದೇಶಕ ಪ್ರೊ: ವೆಂಕಪಯ್ಯ ದೇಸಾಯಿ, ರಿಜಿಸ್ಟ್ರಾರ್ ಪ್ರೊ. ಬಸವರಾಜಪ್ಪ, ಪ್ರೊ: ಸನತ್ ಕುಮಾರ್ ರಾಜಮಾನೆ ಮೊದಲಾದವರಿದ್ದರು.