ಧಾರವಾಡ: ಧಾರವಾಡ ಜಿಲ್ಲೆ ತೇಗೂರ ಗ್ರಾಮದ ಬಳಿ ಹಿಟ್ ಅಂಡ್ ರನ್ ಗೆ ವೃದ್ದ ಬಲಿಯಾಗಿದ್ದಾರೆ. ತೇಗೂರ ಗ್ರಾಮದ ಮುಲ್ಲಾ ಡಾಬಾ ಬಳಿ ಘಟನೆ ನಡೆದಿದೆ.
70 ವರ್ಷದ ಅಬ್ದುಲ್ ಖಾದರ್ ಮೃತಪಟ್ಟವರು ಎಂದು ಹೇಳಲಾಗಿದೆ. ಹಳೆ ಹುಬ್ಬಳ್ಳಿ ಎಸ್.ಎಂ. ಕೃಷ್ಣ ನಗರದ ನಿವಾಸಿ ಅಬ್ದುಲ್ ಖಾದರ್ ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶಕ್ಕೆ ಹೋಗಿದ್ದರು. ಅಪಘಾತದ ನಂತರ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.