ನವದೆಹಲಿ: ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ಸ್ಪುಟ್ನಿಕ್ -5 ಕರ್ನಾಟಕದಲ್ಲಿ ಉತ್ಪಾದಿಸಲು ಪ್ರಕ್ರಿಯೆ ಆರಂಭವಾಗಿದೆ.
ರಾಯಚೂರಿನ ಶಿಲ್ಪಾ ಮೆಡಿಕೇರ್ ಮತ್ತು ಡಾ. ರೆಡ್ಡೀಸ್ ಲ್ಯಾಬೋರೇಟರಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಧಾರವಾಡದಲ್ಲಿ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ.
ರಾಯಚೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶಿಲ್ಪಾ ಮೆಡಿಕೇರ್ ಔಷಧ ಕಂಪನಿಯ ಅಂಗಸಂಸ್ಥೆಯಾದ ಶಿಲ್ಪಾ ಬಯೋಲಾಜಿಕ್ಸ್ ಪ್ರೈವೇಟ್ ಲಿಮಿಟೆಡ್ ಧಾರವಾಡ ಘಟಕದಲ್ಲಿ ಲಸಿಕೆ ಉತ್ಪಾದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂರು ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಅಗತ್ಯ ಯಂತ್ರೋಪಕರಣ, ತಜ್ಞ ಸಿಬ್ಬಂದಿ ಹೊಂದಿದ್ದು ಲಸಿಕೆ ಉತ್ಪಾದನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ವಾರ್ಷಿಕ ಸುಮಾರು 150 ಮಿಲಿಯನ್ ಸ್ಪುಟ್ನಿಕ್ -5 ಲಸಿಕೆ ಉತ್ಪಾದನೆ ಮಾಡಲಾಗುವುದು ಎನ್ನಲಾಗಿದೆ.