
ಧಾರವಾಡ: ಕೊರೋನಾ ಸೋಂಕಿನಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಮಾರಕ ಕೊರೋನಾ ಸೋಂಕಿನಿಂದ ತಾಯಿ ಮೃತಪಟ್ಟ ಮೂರೇ ದಿನಕ್ಕೆ ಅಣ್ಣ ಮತ್ತು ತಮ್ಮ ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ಹಾರೋಬೆಳವಡಿಯಲ್ಲಿ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಮಹಿಳೆ ಮೃತಪಟ್ಟಿದ್ದು ಇಂದು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.