ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ತಡರಾತ್ರಿ 2 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದವರು ನಿಗದಿ ಗ್ರಾಮದ ಯುವಕನ ಮದುವೆಗೆ ತೆರಳಿದ್ದರು. ಮಳೆಯಿಂದಾಗಿ ಮದುವೆಯನ್ನು ಮನ್ಸೂರು ರೇವಣಸಿದ್ದೇಶ್ವರ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಮದುವೆ ಮುನ್ನಾದಿನ ನಿಶ್ಚಿತಾರ್ಥಕ್ಕೆ ತೆರಳಿ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನಕಟ್ಟಿ ಗ್ರಾಮಕ್ಕೆ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳಕ್ಕೆ ಎಸ್.ಪಿ. ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.