ಧನ್ ತೇರಸ್( ಧನ ತ್ರಯೋದಶಿ)ಯನ್ನು ನಾಳೆ ಆಚರಿಸಲಾಗ್ತಿದೆ. ಸಂತೋಷ,ಸಮೃದ್ಧಿ ದಿನವಾದ ಅಂದು ವಿಶೇಷ ವಸ್ತುಗಳನ್ನ ಖರೀದಿ ಮಾಡಲಾಗುತ್ತದೆ. ಬಂಗಾರ,ಬೆಳ್ಳಿ ಖರೀದಿಗೆ ಒಳ್ಳೆ ದಿನವೆಂದು ನಂಬಲಾಗಿದೆ. ಈ ದಿನ ಚಿನ್ನ,ಬೆಳ್ಳಿ, ತಾಮ್ರ,ಹಿತ್ತಾಳೆಯ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಈ ದಿನ ಲಕ್ಷ್ಮಿ ದೇವಿಯ ಮತ್ತು ಗಣೇಶನ ಫೋಟೋ ಇರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಖರೀದಿಸುವುದು ಮಂಗಳಕರ.ಪೊರಕೆ, ಕೊತ್ತಂಬರಿ ಬೀಜವನ್ನು ಖರೀದಿಸಬಹುದು. ಆದ್ರೆ ಈ ದಿನ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಈ ದಿನ ಯಾರಿಗೂ ಸಾಲ ಕೊಡಬಾರದು. ಸಾಲವನ್ನು ತೆಗೆದುಕೊಳ್ಳಬಾರದು.
ಧನ ತ್ರಯೋದಶಿ ದಿನ ಸ್ಟೀಲ್, ಗಾಜು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಬಾರದು. ಇವು ರಾಹು ಮತ್ತು ಶನಿಗೆ ಸಂಬಂಧಿದ ವಸ್ತುಗಳಾಗಿವೆ. ಇವುಗಳನ್ನು ಖರೀದಿಸಿದ್ರೆ ದುರಾದೃಷ್ಟಕ್ಕೆ ಆಹ್ವಾನ ನೀಡಿದಂತೆ.
ಕುಬೇರ,ಲಕ್ಷ್ಮಿ, ಧನ್ವಂತರಿ ಪೂಜೆ ನಡೆಯುತ್ತದೆ. ಆದ್ರೆ ಗಾಜಿನಿಂದ ಮಾಡಿದ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ವಿಗ್ರಹಗಳನ್ನು ಪೂಜಿಸಬೇಡಿ.
ಮನೆಯ ಮುಖ್ಯ ಬಾಗಿಲಿನ ಮುಂದೆ ಶೂ ಮತ್ತು ಚಪ್ಪಲಿಯನ್ನು ಇಡಬೇಡಿ. ಬೆಳಿಗ್ಗೆಯೇ ಮನೆಯ ಬಾಗಿಲು ಮತ್ತು ಮುಂಭಾಗವನ್ನು ತೊಳೆದು ಸ್ವಚ್ಛಗೊಳಿಸಿ.
ಧಂತೇರಸ್ ದಿನ ತಪ್ಪಾಗಿಯೂ ಹಗಲಿನಲ್ಲಿ ಮಲಗಬೇಡಿ.