ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ, ತನ್ನ ಸಹೋದರನಿಗೆ ಶುಭ ಹಾರೈಸುವ ಸಲುವಾಗಿ ಇವರಿಬ್ಬರ ನೃತ್ಯದ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಧನಶ್ರೀ ಅವರು ತಮ್ಮ ವಿವಾಹ ಪೂರ್ವದ ಕಾರ್ಯಕ್ರಮದಲ್ಲಿ ಸಹೋದರನ ಜತೆ ಕಲ್ ಹೋ ನಾ ಹೋ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಅದ್ಭುತ ನೃತ್ಯದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ನಾವು ನೃತ್ಯ ಮಾಡುತ್ತೇವೆ, ಹಾಡುತ್ತೇವೆ, ನಗುತ್ತೇವೆ, ಒಟ್ಟಿಗೆ ಅಳುತ್ತೇವೆ. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ನಾವು ಪರಸ್ಪರರನ್ನು ಬೆಂಬಲಿಸುತ್ತೇವೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣ, ನೀವು ಇಷ್ಟಪಟ್ಟಿದ್ದೆಲ್ಲಾ ಈಡೇರಲಿ” ಎಂದು ಬರೆದಿದ್ದಾರೆ.
ಸದ್ಯ ಈ ಒಡಹುಟ್ಟಿದವರ ನೃತ್ಯದ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಅವರಿಬ್ಬರ ಅದ್ಭುತ ನೃತ್ಯಕ್ಕೆ ವ್ಹಾರೆ ವ್ಹಾ ಎಂದಿದ್ದು, ವಿಡಿಯೋ ಅಪ್ ಲೋಡ್ ಆದ ಕೇವಲ 1 ಗಂಟೆಯಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://www.youtube.com/watch?v=eSNlsFEj0Dk