ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ದಂಪತಿಗಳ ವಿಚ್ಛೇದನದ ವದಂತಿಗಳ ನಡುವೆ ಇದೀಗ ಧನಶ್ರೀ ವರ್ಮಾ ತಮ್ಮ ಮೋಜಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಎಲ್ಲಾ ಆಧಾರರಹಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹೌದು, ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪತಿ ಚಾಹಲ್ ಕೂಡ ಇದ್ದಾರೆ. ಒಂದು ತಿಂಗಳ ಕಾಲ ತನ್ನ ‘ಮೈಕಾ’ಕ್ಕೆ ಹೋಗಬೇಕೆಂದು ಹೇಳಿದಾಗ ಯುಜುವೇಂದ್ರ ಸಂಭ್ರಮಾಚರಣೆ ಮಾಡಿದ್ರು. ಹಿನ್ನೆಲೆಯಲ್ಲಿ ದೀವಾನಾ ಚಿತ್ರದ ʼತೇರಿ ಇಸಿ ಅದಾʼ ಹಾಡನ್ನು ಕೇಳಬಹುದು.
ಮುಂಬೈ ಮೂಲದ ದಂತವೈದ್ಯೆ ಮತ್ತು ನೃತ್ಯ ಸಂಯೋಜಕಿ ಧನಶ್ರೀ ಅವರು ಚಹಾಲ್ ಜೊತೆಗಿನ ಬೇರ್ಪಡುವಿಕೆಯ ಬಗ್ಗೆ ಆಧಾರರಹಿತ ವದಂತಿಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅವರು ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
https://youtu.be/OniYuTFVPm8