
ಇದೀಗ ಕ್ರಿಕೆಟಿಗ ಯಜ್ವೇಂದ್ರ ಚಹಾಲ್ ಪತ್ನಿ, ಡ್ಯಾನ್ಸರ್ ಧನಶ್ರೀ ಡಿಡಿಎಲ್ ಜೆ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿ ಚಿತ್ರ ಪ್ರೇಮಿಗಳ ಮನ ಗೆದ್ದಿದ್ದಾರೆ.
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಿಹಾರಕ್ಕೆ ತೆರಳಿರುವ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್, ಧನಶ್ರೀ ಜೋಡಿ ಖುಷಿಯಲ್ಲಿ ದಿನ ಕಳೆಯುತ್ತಿದೆ.
ಈ ಸಂದರ್ಭದಲ್ಲಿ ಅಲ್ಲಿನ ರಸ್ತೆ, ಹುಲ್ಲುಗಾವಲು, ಪಾರ್ಕಿಂಗ್ ಲಾಟ್‌ನಲ್ಲಿ ಧನಶ್ರೀ ಸ್ಟೆಪ್ ಹಾಕಿ ವಿಡಿಯೋ ಮಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.
“ದಿಲ್ ತೋ ಹರ್ ಕಿಸಿ ಕೆ ಪಾಸ್ ಹೋತಾ ಹೈ, ಲೇಕಿನ್ ಸಬ್ ದಿಲ್ವಾಲೆ ನಹೀ ಹೋತೇ. ಯಾವಾಗಲೂ ಡಿಎಇಎಲ್ ಜೆ ಹುಡುಗಿ. ಪರ್ಫೆಕ್ಟ್ ಲೊಕೇಷನ್ – ಇಂಗ್ಲೆಂಡ್. ಪರ್ಫೆಕ್ಟ್ ವೆದರ್ – ಮಳೆ. ಪರ್ಫೆಕ್ಟ್ ವೈಬ್” ಎಂದು ಶೀರ್ಷಿಕೆಯೊಂದಿಗೆ ಧನಶ್ರೀ ವಿಡಿಯೋಪೋಸ್ಟ್ ಮಾಡಿದ್ದು, ಮೂರು ಲಕ್ಷದಷ್ಟು ವೀಕ್ಷಣೆಯಾಗಿದೆ.