ಪರಿಷತ್ ಸಭಾಪತಿ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಧಾರವಾಡ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ರಾಜ್ಯದ ಡಿಜಿಇ & ಐಜಿಪಿ ಅಲೋಕ್ ಮೋಹನ್ ಹಾಗೂ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ದಾ.ಗೋಪಾಲ ಬ್ಯಾಕೋಡ್ ಅವರಿಗೆ ಎಸ್ ಟಿ ಆಯೋಗ ನೊಟಿಸ್ ನೀಡಿದೆ. ಡಿಸೆಂಬರ್ 12ರಂದು ದೆಹಲಿಯ ಎಸ್ ಟಿ ಆಯೋಗದ ಕಚೇರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಧಾರವಾಡದ ಅರುಣ ಹಿರೇಹಾಳ ನಿದಿರುವ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಎಸ್ ಟಿ ಆಯೋಗ ನೊಟಿಸ್ ಜಾರಿ ಮಾಡಿದೆ.
ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ನವೆಂಬರ್ ನಲ್ಲಿ ಸಂಸ್ಥೆಯ ಆಡಳಿತ ಮಂದಳಿಯಲ್ಲಿಇ ಗಲಾಟೆ ನಡೆದಿತ್ತು. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಆರೋಪ ಕೇಳಿಬಂದಿತ್ತು. ಆದಾಗ್ಯೂ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರು ಮುಂದಾಗಿಲ್ಲ ಎಂದು ಅರುಣ್ ಹಿರೇಹಾಳ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ.