ಐಪಿಎಲ್ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡುತ್ತೆ ಎಂಬುದ್ರಲ್ಲಿ ಎರಡು ಮಾತಿಲ್ಲ. ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಭಾರತ ಅಂಡರ್ 19 ವಿಶ್ವಕಪ್ ಕೈವಶ ಮಾಡಿಕೊಂಡಿದೆ. ಅಂಡರ್ 19 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಕೆಲ ಆಟಗಾರರಿಗೆ ಐಪಿಎಲ್ ಬಾಗಿಲು ತೆರೆಯಲಿದೆ.
ಈ ಬಾರಿ ಐಪಿಎಲ್ ಹರಾಜಿನಲ್ಲಿ ನಾಲ್ಕೈದು ಅಂಡರ್ 19 ಆಟಗಾರರು ಮಾರಾಟವಾಗುವ ಸಾಧ್ಯತೆಯಿದೆ. ಅದ್ರಲ್ಲಿ ರಾಜ್ ಅಂಗದ್ ಬಾವಾ ಕೂಡ ಒಬ್ಬರು. ಅಂಡರ್-19 ವಿಶ್ವಕಪ್ನಲ್ಲಿ ಅತ್ಯುತ್ತಮ ಆಲ್ರೌಂಡರ್ ಆಗಿ ಹೊರಹೊಮ್ಮಿದ ಬಾವಾ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಬಾವಾ ಮೂಲ ಬೆಲೆ 20 ಲಕ್ಷ ರೂಪಾಯಿಯಾಗಿದೆ.
ಹರ್ನೂರ್ ಸಿಂಗ್, ಅಂಡರ್-19 ವಿಶ್ವಕಪ್ನಲ್ಲಿ ಹೆಚ್ಚು ಮಿಂಚದೆ ಹೋದ್ರೂ 6 ಪಂದ್ಯಗಳಲ್ಲಿ 141 ರನ್ ಗಳಿಸಿದ್ದರು. 19 ವರ್ಷದ ಎಡಗೈ ಬ್ಯಾಟ್ಸ್ ಮನ್ ಹರ್ನೂರ್ ಸಿಂಗ್, ಹರಾಜಿನ ಮೂಲ ಬೆಲೆ 20 ಲಕ್ಷ ರೂಪಾಯಿ.
ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್ ಮನ್ ಡೆವಾಲ್ಡ್ ಬ್ರೆವಿಸ್ 2022 ರ ಅಂಡರ್-19 ವಿಶ್ವಕಪ್ನ 6 ಪಂದ್ಯಗಳಲ್ಲಿ 506 ರನ್ ಗಳಿಸಿದ್ದರು. ಹರಾಜಿನಲ್ಲಿ ಅವರು ತಮ್ಮ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿಗೆ ನಿಗದಿಪಡಿಸಿದ್ದಾರೆ.
ಇನ್ನು ಭಾರತದ ಅಂಡರ್-19 ವಿಶ್ವಕಪ್ ತಂಡದ ನಾಯಕ ಯಶ್ ಧುಲ್ ಕೂಡ ರೇಸ್ ನಲ್ಲಿದ್ದಾರೆ. ಧುಲ್ 4 ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ ಒಟ್ಟು 229 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ ಅವರ ಮೂಲ ಬೆಲೆ 20 ಲಕ್ಷ ರೂಪಾಯಿ.
ಅಂಡರ್ 19ನಲ್ಲಿ ಮಿಂಚಿದ ವಿಕ್ಕಿ ಓಸ್ಟ್ವಾಲ್, ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದಿದ್ದರು. ಐಪಿಎಲ್ ಹರಾಜಿನಲ್ಲಿ 20 ಲಕ್ಷ ಮೂಲ ಬೆಲೆ ಹೊಂದಿದ್ದಾರೆ. ಈ ಆಟಗಾರರ ಪೈಕಿ ಯಾವ್ಯಾವ ಆಟಗಾರರು, ಯಾವ ತಂಡಕ್ಕೆ, ಎಷ್ಟು ಬೆಲೆಗೆ ಮಾರಾಟವಾಗ್ತಾರೆ ನೋಡ್ಬೇಕಿದೆ.