ಫೆಬ್ರವರಿ 22, ಮಂಗಳವಾರದಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ 40 ಟನ್ ತೂಕದ ಧ್ವಜಸ್ತಂಭವು ಹಠಾತ್ ಕುಸಿದು ಬಿದ್ದಿದೆ. ಆದರೆ ಭಕ್ತರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಗುಂಟೂರು ಜಿಲ್ಲೆಯ ಪಂಡಿತಿವಾರಿ ಪಾಲಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುರಾತನ ದೇವಾಲಯ ಒಂದರಲ್ಲಿ 40 ಟನ್ ತೂಕದ 44 ಅಡಿ ಏಕಶಿಲೆಯ ಧ್ವಜ ಕಂಬವನ್ನು ಬದಲಾಯಿಸಲಾಗುತ್ತಿದೆ. ಈ ಹಳೆಯ ಧ್ವಜ ಸ್ತಂಭವನ್ನು 1963 ರಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ.
BREAKING NEWS: 2 ದಿನ ಶಾಲೆ, ಕಾಲೇಜಿಗೆ ರಜೆ; ಬೆಳಗ್ಗೆ 6 ರಿಂದ 9 ರ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
ದೈತ್ಯಾಕಾರದ ಕ್ರೇನ್ ಸಹಾಯದಿಂದ ಧ್ವಜಸ್ತಂಭವನ್ನು ಬದಲಾಯಿಸುವ ಧಾರ್ಮಿಕ ಕ್ರಿಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದ್ದಕ್ಕಿದ್ದಂತೆ, ಧ್ವಜದ ಕಂಬದ ಮೇಲ್ಭಾಗವು ಮುರಿಯಿತು. ಆ ಮುರಿದ ದೊಡ್ಡ ತುಂಡು ನೆಲಕ್ಕೆ ಬಿದ್ದಿತು, ಈ ಸಂದರ್ಭದಲ್ಲಿ ಅಲ್ಲಿದ್ದ ಯಾರಿಗೂ ಯಾವೊಂದು ಗಾಯವಾಗದೇ ಸುರಕ್ಷಿತವಾಗಿದ್ದಾರೆ.
ಈಗ ಹಳೆಯ ಧ್ವಜದ ಸ್ತಂಭದ ಬದಲಿಗೆ ಹೊಸ ಧ್ವಜಸ್ತಂಭವನ್ನು ಸಿದ್ಧಪಡಿಸಲಾಗುತ್ತಿದೆ. ಅದೃಷ್ಟವಶಾತ್ ಹಳೆಯ ಧ್ವಜಸ್ತಂಭ ಕುಸಿದು ಬಿದ್ದಾಗ ಅದರ ಸುತ್ತಲೂ ನಿಂತಿದ್ದ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.