![](https://kannadadunia.com/wp-content/uploads/2023/05/devoleenabhattacharjeethekeralastory-1683975594-1024x576.jpg)
ಸಿನಿಮಾ ನೋಡಿದ ನಂತರ ತನ್ನ ಬಾಯ್ಫ್ರೆಂಡ್ನೊಂದಿಗೆ ಸಂಬಂಧ ಮುರಿದುಬಿದ್ದ ಮಹಿಳೆಯ ಕುರಿತ ಪೋಸ್ಟ್ ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ತನ್ನ ಜಿಮ್ ತರಬೇತುದಾರ ಶಾನವಾಜ್ ಶೇಖ್ ಅವರೊಂದಿಗೆ ವಿವಾಹವಾದ ನಟಿ ದೇವೋಲೀನಾ ಭಟ್ಟಾಚಾರ್ಜಿ, ತಾನು ಪತಿಯೊಂದಿಗೆ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ವೀಕ್ಷಿಸಿದ್ದೇನೆ. ಪತಿ ಚಿತ್ರವನ್ನು ಅಭಿನಂದಿಸಿದ್ದಾರೆ ಎಂದು ಬಹಿರಂಗಪಡಿಸಿದರು.
ಈ ರೀತಿ ಟ್ವಿಟರ್ನಲ್ಲಿ ಬರೆದುಕೊಂಡಿರುವ ದೇವೋಲೀನಾ, “ಇದು ಯಾವಾಗಲೂ ಹಾಗಲ್ಲ. ನನ್ನ ಪತಿ ಮುಸ್ಲಿಂ. ಅವರು ಚಲನಚಿತ್ರವನ್ನು ವೀಕ್ಷಿಸಲು ನನ್ನೊಂದಿಗೆ ಬಂದರು. ಅವರು ಚಿತ್ರವನ್ನು ಮೆಚ್ಚಿದರು. ಅವರು ಅದನ್ನು ಅಪರಾಧವೆಂದು ಪರಿಗಣಿಸಲಿಲ್ಲ ಅಥವಾ ಅವರು ತಮ್ಮ ಧರ್ಮಕ್ಕೆ ವಿರುದ್ಧವೆಂದು ಭಾವಿಸಲಿಲ್ಲ. ಪ್ರತಿಯೊಬ್ಬ ಭಾರತೀಯನೂ ಹೀಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ದಿ ಕೇರಳ ಸ್ಟೋರಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಕಳೆದ ತಿಂಗಳು ಬಿಡುಗಡೆಯಾದಾಗಿನಿಂದ ದಿ ಕೇರಳ ಸ್ಟೋರಿ ಚಿತ್ರ ಚರ್ಚೆಯ ವಿಷಯವಾಗಿದೆ. ಕೇರಳದಲ್ಲಿಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಅವರು ಐಸಿಸ್ಗೆ ಸೇರಿದ್ದಾರೆ ಎಂಬ ಚಿತ್ರಕಥೆಯನ್ನೊಳಗೊಂಡಿರುವ ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿದೆ.