ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನ ನೀಡುವ ಚಿಕ್ಕಮಗಳೂರಿನ ಮಾಣಿಕ್ಯಧಾರ ದೇವಿರಮ್ಮ ದೇವಿ ದರ್ಶನ ಪಡೆಯಲು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ದೇವಿ ದರ್ಶನ ಪಡೆದು ಪುನೀತರಾಗಬೇಕೆಂಬ ಆಶಯದಿಂದ ಪ್ರತಿ ದಿನ ಲಕ್ಷಾಂತರ ಜನ ಭಕ್ತರು ಬೆಟ್ಟ ಹತ್ತಿ ದೇವಿ ದರ್ಶನ್ ಅಪಡೆಯುತ್ತಿದ್ದು, ಈ ನಡುವೆ ಅನೇಕ ಭಕ್ತರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಮಾಣಿಕ್ಯಧಾರ ದೇವಿರಮ್ಮ ಬೆಟ್ಟದಲ್ಲಿರುವ ದೇವಿರಮ್ಮ ದೇವಿ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿದ್ದು, ಬರಿಗಾಲಲ್ಲಿ ಕಾಡು-ಮೇಡು ಅಲೆದು ಬೆಟ್ಟ ಹತ್ತಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಭಕ್ತರಿಗೆಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಆದಾಗ್ಯೂ ಅನೇಕ ಭಕ್ತರು ಅಸ್ವಸ್ಥರಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.
ಬೆಟ್ಟ ಏರುವಾಗ ಮುಂಜಾಗೃತೆ ವಹಿಸುವಂತೆ ಭಕ್ತರಿಗೆ ಸೂಚಿಸಲಾಗಿದೆ. ಬೆಟ್ಟದ ಮಾರ್ಗದಲ್ಲಿ ಭದ್ರತೆಗಾಗಿ ಪೊಲೀಸರನ್ನೂ ನಿಯೋಜಿಸಲಾಗಿದೆ. ಆದರೆ ಬೆಟ್ಟದ ಮೇಲೆ ಹತ್ತಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. ಕೆಲವರು ದುರ್ಗಮ ದಾರಿಯಲ್ಲಿ ನಡೆಯುವಾಗ ಬಿದ್ದು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಚಿಕ್ಕಮಗಳುರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಸ್ವಸ್ಥರಾಗಿರುವವರನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದು, ಬೆಟ್ಟದ ತುದಿಯಿಂದ5 ಕಿ.ಮೀವರೆಗೂ ಸ್ಟ್ರೆಚರ್ ಮೂಲಕ ಕರೆದೊಯ್ದು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.