ಮುಂಬೈ: 15 ವರ್ಷ ಹಳೆಯ 13000 ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ.
ಹಳೆಯ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ತಡೆಯುವ ಉದ್ದೇಶದಿಂದ 15 ವರ್ಷ ಮೀರಿದ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳು ಮತ್ತು 13000 ಸರ್ಕಾರಿ ವಾಹನಗಳನ್ನು ಗುಜರಿಗೆ ಆಗುವಂತೆ ಆದೇಶಿಸಿದ್ದಾರೆ.
ಮಂಗಳವಾರ ಸಭೆ ನಡೆಸಿದ ಅವರು ಸಾರಿಗೆ ಕ್ಷೇತ್ರದಲ್ಲಿ ಆಧುನಿಕತೆ ಬೆಳವಣಿಗೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಉಳಿದ ಬಸ್ ಗಳನ್ನು ಸಿ.ಎನ್.ಜಿ. ಮತ್ತು ಎಲ್.ಎನ್.ಜಿ.ಗಳಾಗಿ ಪರಿವರ್ತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.