ಜನಪ್ರಿಯ ನೈರ್ಮಲ್ಯ ಬ್ರಾಂಡ್ ಆಗಿರುವ ಡೆಟಾಲ್, ಕೊರೊನಾ ವಾರಿಯರ್ಸ್ಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಮುಂದಾಗಿದೆ. ಭಾನುವಾರ ಈ ಸಂಬಂಧ ಘೋಷಣೆಯನ್ನ ಹೊರಡಿಸಿರುವ ಡೆಟಾಲ್ ಬ್ರಾಂಡ್, ತಮ್ಮ ಕಂಪನಿಯ ಹ್ಯಾಂಡ್ವಾಶ್ನ ಪ್ಯಾಕೆಟ್ನ ಲೋಗೋ ಇರುವ ಜಾಗದಲ್ಲಿ ಕೋವಿಡ್ ಪ್ರೊಟೆಕ್ಟರ್ ಫೋಟೋಗಳನ್ನ ಹಾಕಿ ಅವರ ಸ್ಪೂರ್ತಿದಾಯಕ ಕತೆಯನ್ನ ಬರೆಯೋದಾಗಿ ಹೇಳಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸಿ ಜನರ ನೆರವಿಗೆ ನಿಂತ 100 ಮಂದಿಯ ಕತೆಯನ್ನ ಈ ರೀತಿ ಹ್ಯಾಂಡ್ವಾಶ್ಗಳ ಪ್ಯಾಕೆಟ್ನಲ್ಲಿ ನಮೂದಿಸುವ ಮೂಲಕ ಗೌರವ ಸಲ್ಲಿಸಲು ಡೆಟಾಲ್ ಮುಂದಾಗಿದೆ.
ಡೆಟಾಲ್ ಕಂಪನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ಲೋಗೋದ ಜಾಗದಲ್ಲಿ ಕೊರೊನಾ ವಾರಿಯರ್ಸ್ ಫೋಟೋ ಹಾಗೂ ಅವರ ಸ್ಪೂರ್ತಿದಾಯಕ ಕತೆಯನ್ನ ಮುದ್ರಿಸಲಿದ್ದೇವೆ ಎಂದು ಕಂಪನಿ ಹೇಳಿದೆ.
ಇಂತಹ ಸ್ಪೂರ್ತಿದಾಯಕ ಕತೆಗಳನ್ನ ಶೇರ್ ಮಾಡಿದಾಗ ಅದು ಇನ್ನಷ್ಟು ಜನರಿಗೆ ಸಮಾಜ ಸೇವೆ ಮಾಡಲು ಸ್ಪೂರ್ತಿ ನೀಡಲಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ಈ ರೀತಿಯ ಕತೆಗಳನ್ನ ಹೊಂದಿರುವ ನಮ್ಮ ಕಂಪನಿಯ ಪ್ರಾಡಕ್ಟ್ಗಳು ಇಡೀ ದೇಶಕ್ಕೆ ಸಕಾರಾತ್ಮಕ ಸಂದೇಶ ರವಾನಿಸಲಿದೆ ಎಂದು ನಂಬಿದ್ದೇವೆ ಎಂದು ದಿಲೇನ್ ಗಾಂಧಿ ಹೇಳಿದ್ರು.
ಡೆಟಾಲ್ ಸೆಲ್ಯೂಟ್ ಪ್ಯಾಕ್ಗಳು ಇ ಮಾರುಕಟ್ಟೆ ಸೇರಿದಂತೆ ಭಾರತದ 5 ಲಕ್ಷಕ್ಕೂ ಹೆಚ್ಚು ಮಳಿಗೆಗಳಲ್ಲಿ ಲಭ್ಯವಿದೆ. ಜೂನ್ ಮೂರನೇ ವಾರದಿಂದ ಡೆಟಾಲ್ ಸೆಲ್ಯೂಟ್ ಪ್ಯಾಕ್ಗಳನ್ನ ಮಾರುಕಟ್ಟೆಗೆ ಬಿಡಲು ಕಂಪನಿ ತೀರ್ಮಾನಿಸಿದೆ.