alex Certify ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ಆಹಾರವನ್ನು ಕಂಟ್ರೋಲ್‌ ಮಾಡೋದು ಬಹಳ ಕಷ್ಟದ ಕೆಲಸ. ರುಚಿ ರುಚಿಯಾದ ಜಂಕ್‌ ಫುಡ್‌ಗಳನ್ನು ನೋಡಿದಾಗ ಎಂಥವರ ಬಾಯಲ್ಲೂ ನೀರೂರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ವಿಷದ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗುತ್ತದೆ.

ವಿಷಕಾರಿ ವಸ್ತುಗಳು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವುಗಳಿಂದ ಒಂದಿಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ. ಕೆಲವು ಮನೆಮದ್ದುಗಳ ಸಹಾಯದಿಂದ ನಾವು ನಮ್ಮ ದೇಹವನ್ನು ನಿರ್ವಿಷಗೊಳಿಸಬಹುದು.

ಆರೋಗ್ಯಕರ ಆಹಾರವನ್ನು ಸೇವಿಸಿ: ನಾವು ಆರೋಗ್ಯಕರ ಆಹಾರವನ್ನು ಸೇವಿಸಿದರೆ ದೇಹದಿಂದ ವಿಷವನ್ನು ಹೊರಹಾಕಲು ಸುಲಭವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕರಿದ ತಿನಿಸುಗಳು ಅಥವಾ ಫಾಸ್ಟ್ ಫುಡ್‌, ಜಂಕ್ ಫುಡ್‌ಗಳನ್ನು ತಿನ್ನುವುದರಿಂದ ವಿಷವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಹಸಿರು ತರಕಾರಿಗಳು, ಹಣ್ಣುಗಳು, ಗ್ರೀನ್‌ ಟೀ, ಸಲಾಡ್‌, ನಿಂಬೆ ರಸ, ಆಪಲ್ ಸೈಡರ್ ವಿನೆಗರ್ ಮುಂತಾದವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಾರೆ.

ನಿಯಮಿತವಾಗಿ ವ್ಯಾಯಾಮ ಮಾಡಿ : ಸಾಮಾನ್ಯವಾಗಿ ಜನರು ಫಿಟ್‌ನೆಸ್ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ವರ್ಕೌಟ್ ಮಾಡುತ್ತಾರೆ. ನಿಯಮಿತ ವ್ಯಾಯಾಮವು ದೇಹವನ್ನು ನಿರ್ವಿಷಗೊಳಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಜಿಮ್ ಅಥವಾ ವ್ಯಾಯಾಮ ಮಾಡಿ ಬೆವರಿಳಿಸುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳ ಸಂಗ್ರಹವನ್ನು ಕಡಿಮೆ ಮಾಡಬಹುದು. ವ್ಯಾಯಾಮ ರಕ್ತವನ್ನು ಸರಿಯಾಗಿ ಪಂಪ್ ಮಾಡುವುದರೊಂದಿಗೆ ಶುದ್ಧೀಕರಿಸುತ್ತದೆ. ನೀವು ಉಸಿರಾಟದ ವ್ಯಾಯಾಮ, ಸ್ಟ್ರೆಚಿಂಗ್ ಮತ್ತು ಯೋಗವನ್ನು ಮಾಡಬೇಕು. ಇದು ಉತ್ತಮ ಪ್ರಯೋಜನವನ್ನು ನೀಡುತ್ತದೆ.

ನಿದ್ದೆ ಕಡಿಮೆ ಮಾಡಬೇಡಿ: ದೇಹವನ್ನು ನಿರ್ವಿಷಗೊಳಿಸಲು ಸಾಕಷ್ಟು ನಿದ್ದೆಯ ಅಗತ್ಯವಿದೆ. ನಮ್ಮ ಜೀವಕೋಶಗಳು ಚೇತರಿಸಿಕೊಳ್ಳುವಾಗ ವಿಷವನ್ನು ಹೊರಹಾಕಬಹುದು. 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆ  ನಿದ್ದೆ ಮಾಡಲು ಪ್ರಯತ್ನಿಸಿ, ಇದು ದೇಹವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ.

ದೇಹದಲ್ಲಿ ನೀರಿನ ಕೊರತೆ ಉಂಟಾಗಬಾರದು: ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ.  ದೇಹದ ಹೆಚ್ಚಿನ ಭಾಗವು ನೀರಿನಿಂದಲೂ ರೂಪಿಸಲ್ಪಟ್ಟಿದೆ. ನೀರು ನಮ್ಮ ದೇಹವನ್ನು ಹೈಡ್ರೀಕರಿಸುತ್ತದೆ, ಇದು ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ನೀವು ಹೆಚ್ಚು ನೀರು ಕುಡಿದರೆ ಮೂತ್ರದ ಮೂಲಕ ವಿಷಕಾರಿ ಅಂಶಗಳು ಹೊರಬರುತ್ತವೆ. ಚರ್ಮದಲ್ಲಿ ಅದ್ಭುತವಾದ ಹೊಳಪು ಇರುತ್ತದೆ ಮುಖದ ಮೇಲಿನ ಮೊಡವೆಗಳು ಸಹ ಕಣ್ಮರೆಯಾಗುತ್ತವೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...