ಬಹುತೇಕ ಎಲ್ಲರೂ ಈಗ ಜಂಕ್ ಫುಡ್, ಸ್ಟ್ರೀಟ್ ಫುಡ್ ಇಷ್ಟಪಡ್ತಾರೆ. ಅದನ್ನು ತಿಂದ ಮೇಲೆ ದೇಹವನ್ನು ಡಿಟಾಕ್ಸ್ ಮಾಡಬೇಕು, ಇಲ್ಲದೇ ಹೋದರೆ ಉದರ ಸಮಸ್ಯೆಗಳು ಶುರುವಾಗುತ್ತವೆ. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ ಸಹ ಬರಬಹುದು.
ಹಾಗಾಗಿ ದೇಹವನ್ನು ನಿರ್ವಿಷಗೊಳಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಜಂಕ್ ಫುಡ್ ತಿಂದ ನಂತರ ದೇಹವನ್ನು ಡಿಟಾಕ್ಸ್ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ಜಂಕ್ ಫುಡ್ ತಿಂದ ಮೇಲೆ ದೇಹವನ್ನು ನಿರ್ವಿಷಗೊಳಿಸಲು ಸಿಟ್ರಸ್ ಅಂಶವಿರುವ ಹಣ್ಣುಗಳನ್ನು ಸೇವಿಸಬೇಕು. ಕಿತ್ತಳೆ, ದ್ರಾಕ್ಷಿ, ನಿಂಬೆ ಇತ್ಯಾದಿಗಳನ್ನು ನೀವು ತಿನ್ನಬಹುದು. ನಿಮ್ಮ ಆಹಾರದಲ್ಲಿ ಹೆಚ್ಹೆಚ್ಚು ಹಣ್ಣುಗಳನ್ನು ಸೇರಿಸಲು ಪ್ರಯತ್ನಿಸಿ.
ಜಂಕ್ ಫುಡ್ ಸೇವನೆಯ ನಂತರ ನೀವು ದಿನವಿಡೀ ಹೆಚ್ಚು ನೀರು ಕುಡಿಯಬೇಕು. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ದೇಹದಲ್ಲಿನ ವಿಷವನ್ನು ತೆಗೆದುಹಾಕಲು ನೀವು ನೀರನ್ನು ಬಳಸಬೇಕು. ಇದಲ್ಲದೆ ಎಳನೀರು, ಜ್ಯೂಸ್ ಮತ್ತು ಮಜ್ಜಿಗೆಯನ್ನು ಕೂಡ ಕುಡಿಯಬಹುದು.
ನೀವು ಹೆಚ್ಚು ಆಲ್ಕೋಹಾಲ್ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಆ ಅಭ್ಯಾಸವನ್ನು ಬಿಡಿ. ಇದು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಹಾ ಅಥವಾ ಕಾಫಿಯನ್ನು ಹೆಚ್ಹೆಚ್ಚು ಸೇವಿಸುವುದು ಕೂಡ ಒಳ್ಳೆಯದಲ್ಲ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳಿ. ವ್ಯಾಯಾಮದ ಸಹಾಯದಿಂದ ನೀವು ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ದೇಹವನ್ನು ನೈಸರ್ಗಿಕವಾಗಿ ಡಿಟಾಕ್ಸ್ ಮಾಡಲು ವ್ಯಾಯಾಮ ಬಹಳ ಮುಖ್ಯ.
ಲಘು ವ್ಯಾಯಾಮದ ಸಹಾಯದಿಂದ, ನೀವು ದೇಹವನ್ನು ಫಿಟ್ ಆಗಿ ಇರಿಸಬಹುದು. ಆರಂಭದಲ್ಲಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ನಂತರ ಸಮಯವನ್ನು ಹೆಚ್ಚಿಸಿ. ಇದರಿಂದ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವ ಜೊತೆಗೆ ಡಿಟಾಕ್ಸ್ ಕೂಡ ಮಾಡಬಹುದು.