ಸುಂದರವಾದ ಮನೆಯೊಂದು ತಮಗೆ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಜಾಗ, ಹಣಕ್ಕೆ ತಕ್ಕ ಹಾಗೇ ಮನೆ ಕಟ್ಟಬೇಕಾಗುತ್ತದೆ. ಮನೆಯಲ್ಲಿರುವ ಬೆಡ್ ರೂಂ ಅನ್ನು ಚೆನ್ನಾಗಿ ವಿನ್ಯಾಸ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಬೆಡ್ ರೂಂ ತುಂಬಾ ದೊಡ್ಡದಿಲ್ಲ, ಎಲ್ಲವನ್ನೂ ಅಲ್ಲಿ ಸರಿಯಾಗಿ ಇಡುವುದಕ್ಕೆ ಆಗಲ್ಲ ಎನ್ನುವವರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
ಮಲಗುವ ಮಂಚ ಇಡೀ ಬೆಡ್ ರೂಂ ಅನ್ನು ಆವರಿಸಿಕೊಳ್ಳುತ್ತದೆ. ಹಾಗಾಗಿ ಮಂಚ ತೆಗೆದುಕೊಳ್ಳುವಾಗ ಸ್ಟೋರೇಜ್ ಡ್ರಾವರ್ಸ್ ಇರುವುದನ್ನು ಆರಿಸಿಕೊಳ್ಳಿ. ಇದರಿಂದ ಆ ಜಾಗದಲ್ಲಿ ಬೆಡ್ ಶೀಟ್, ತಲೆದಿಂಬು, ನಿಮ್ಮ ಜೀನ್ಸ್ ಇತ್ಯಾದಿಗಳನ್ನು ಅದರಲ್ಲಿ ಸುಲಭವಾಗಿ ಇಡಬಹುದು.
ಇನ್ನು ಬೆಡ್ ರೂಂ ನ ಕಾರ್ನರ್ ಅನ್ನು ಯಾವುದೇ ಕಾರಣಕ್ಕೂ ಖಾಲಿ ಬಿಡಬೇಡಿ. ಇಲ್ಲಿ ಶೆಲ್ಪ್ ಗಳನ್ನು ಮಾಡಿ. ಶೋ ಪೀಸ್ ಗಳನ್ನು ಇಡಬಹುದು. ಅಥವಾ ಕೆಲವೊಂದು ಅಗತ್ಯವಿರುವ ವಸ್ತುಗಳನ್ನು ಇಡಬಹುದು.
ಇನ್ನು ಬೆಡ್ ಸೈಡ್ ಸ್ಟ್ಯಾಂಡ್ ಮಾಡಿದರೆ ಇನ್ನು ಒಳ್ಳೆಯದು. ಇಲ್ಲಿ ಬುಕ್ಸ್, ಕೆಲವೊಂದು ಆಪ್ತ ಫೋಟೊಗಳನ್ನು ಇಡಬಹುದು. ಹಾಗಂತ ಜಾಸ್ತಿ ತುಂಬಿಸಬೇಡಿ. ಅಗತ್ಯವಿರುವದನ್ನು ಮಾತ್ರ ಇಡಿ. ಇದರಿಂದ ನೋಡುವುದಕ್ಕೂ ಲುಕ್ ಆಗಿರುತ್ತದೆ.