ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ ನಕ್ಷೆ.
ದೇಶದ ವಿವಿಧ ಪ್ರದೇಶಗಳ ಭೌಗೋಳಿಕ ಹಾಗೂ ಹವಾಗುಣಗಳಿಗೆ ತಕ್ಕಂತೆ ನಾನಾ ಬಗೆಯ ಆಹಾರ ಸಂಸ್ಕೃತಿಗಳು ಇರುವುದು ನಮ್ಮೆಲ್ಲರಿಗೂ ತಿಳಿದೇ ಇದೆ. ಮೆಟ್ರೋಪಾಲಿಟನ್ ನಗರಗಳಲ್ಲಿ ದೇಶದ ಎಲ್ಲಾ ಮೂಲೆಗಳ ಜನರು ಬಂದು ಜೀವನ ನಡೆಸುವ ಕಾರಣ, ಈ ದೊಡ್ಡ ಊರುಗಳ ಜನತೆಗೆ ದೇಶದ ನಾನಾ ಭಾಗಗಗಳ ಪರಂಪರೆ ಸಂಸ್ಕೃತಿಗಳ ಪರಿಚಯವಾಗುತ್ತದೆ.
ದಕ್ಷಿಣ ಭಾರತೀಯರೆಂದರೆ ಇಡ್ಲಿ ಅಥವಾ ದೋಸೆಯನ್ನೇ ತಿನ್ನುತ್ತಾರೆ ಎಂದು ಭಾವಿಸುವ ದೇಶದ ಮಂದಿ ಅದೇ ಈಶಾನ್ಯ ಭಾರತೀಯರಾದರೆ ಮೋಮೋಗಳನ್ನೇ ತಿನ್ನುವರೆಂಬ ಭಾವನೆ ಹೊಂದಿದ್ದಾರೆ. ಕೋಲ್ಕತ್ತಾದ ಮಂದಿ ಎಂದೊಡನೇ ಅವರು ದಿನವಿಡೀ ಮೀನು ಸೇವನೆ ಮಾಡುತ್ತಾರೆ ಎಂದು ಭಾವಿಸುವ ಮಂದಿ ಬಿಹಾರಿಗಳು ಎಂದಾಕ್ಷಣ ಲಿಟ್ಟಿ ಛೋಕಾ ನೆನಪಿಸಿಕೊಳ್ಳುತ್ತಾರೆ.
ಹೀಗೆ ದೇಶದ ಯಾವುದಾದರೂ ರಾಜ್ಯ/ಪ್ರದೇಶದ ನೆನಪಾದ ಕೂಡಲೇ ಯಾವ ಖಾದ್ಯ ಮನಸ್ಸಿಗೆ ಬರುತ್ತದೆ ಎನ್ನುವನ ಟ್ರೆಂಡ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ನಾನಾ ಪ್ರದೇಶಗಳ ಜನರು ತಂತಮ್ಮ ಪ್ರದೇಶ ಎಂದಾಕ್ಷಣ ಜನರು ಯಾವ ತಿಂಡಿ ನೆನಪಿಸಿಕೊಳ್ಳುತ್ತಾರೆ ಎಂದು ತಮ್ಮದೇ ಟ್ವೀಟ್ಗಳ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
https://twitter.com/ipravinnn/status/1670812897923198976?ref_src=twsrc%5Etfw%7Ctwcamp%5Etweetembed%7Ctwterm%5E1670812897923198976%7Ctwgr%5E15c39dae498624aab2b694e26339d2ccd24378cf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdesi-twitter-lists-stereotypical-dishes-associated-with-different-states-2395701-2023-06-21