ಚಾಟ್ಸ್‌ಗಳ ಆರ್ಭಟ ಸದ್ಯ ಜೋರಾಗಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಂಬ ಪದ್ಧತಿಯೇ ಬದಲಾಗಿ ಹೋಗಿದೆ. ಯಾವಾಗ ಹಸಿವಾಗುತ್ತದೆಯೋ ಆವಾಗ ಸಿಕ್ಕಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಕೆಟ್ಟ ಅಭ್ಯಾಸ ಯುವ ಸಮುದಾಯದಲ್ಲಿ ಬೆಳೆದುಕೊಂಡಿದೆ. ಅದು ರಸ್ತೆ ಬದಿಯ ಕ್ಯಾಂಟೀನ್‌ನಲ್ಲಿನ ತಿಂಡಿ ಆಗಿರಬಹುದು. ಬಾಯಿರುಚಿಗೆ ಆಗಾಗ್ಗೆ ಸವಿಯುವ ಚಾಟ್ಸ್‌ಗಳೇ ಆಗಿರಬಹುದು.
ಒಟ್ಟಿನಲ್ಲಿ ಏನೋ ಒಂದು ತಿಂದು ಹೊಟ್ಟೆಗೆ ಹೋದರೆ ಸಾಕು ಎನ್ನುವ ಮನಃಸ್ಥಿತಿ ಜನರಲ್ಲಿ ಹೆಚ್ಚಾಗುತ್ತಿದೆ. ಆಹಾರ ಸೇವನೆ ಪದ್ಧತಿ, ಅದರ ಹಿಂದಿನ ವೈಜ್ಞಾನಿಕ ಕಾರಣಗಳು ಯಾರಿಗೂ ಬೇಡವಾಗಿದೆ.
ಒನಕೆ ಓಬವ್ವ ಜಯಂತಿಗೆ ಮೋದಿ ನಮನ: ವೀರವನಿತೆ ಧೈರ್ಯ ಎಂದಿಗೂ ಮರೆಯಲಾಗದು ಎಂದ್ರು ಪ್ರಧಾನಿ
ಇಂಥದ್ದೇ ಒಂದು ಚಾಟ್ಸ್ ಸವಿದ ಹಿರಿಯರೊಬ್ಬರು ಮುಖ ಕಿವುಚಿದ್ದಾರೆ. ಆಧುನಿಕತೆಯ ಭರದಲ್ಲಿ ಸಿಕ್ಕಿದ ಮಕ್ಕಳು, ಮೊಮ್ಮಕ್ಕಳ ಬಲವಂತಕ್ಕೆ 80 ವರ್ಷದ ಅಜ್ಜಿಯು ತಮ್ಮ ಬಾಯಿಗೆ ಪಿಜ್ಜಾ ತುರುಕಿಕೊಂಡಿದ್ದಾರೆ. ತಮ್ಮ ಜೀವನದಲ್ಲೇ ಕಂಡಿರದ ಆಹಾರ ಖಾದ್ಯವೊಂದನ್ನು ಅವರು ಬಾಯಿಗಿಟ್ಟ ಕೂಡಲೇ ಮುಖ ಕಿವುಚಿಕೊಂಡಿದ್ದಾರೆ. ಹಲ್ಲುಗಳಿಲ್ಲದ ಅವರ ಬೊಚ್ಚು ಬಾಯಿಯು, ಅವರ ಮುಖಭಾವಕ್ಕೆ ಮತ್ತಷ್ಟು ಆಕರ್ಷಣೆ ನೀಡಿದೆ. ಗ್ರೀಶ್ ಭಟ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಜ್ಜಿಯ ವಿಡಿಯೊ ಭಾರಿ ವೈರಲ್ ಕೂಡ ಆಗಿದೆ.
ಪಿಜ್ಜಾ ಮೇಲೆ ಸುರಿಯಲಾಗಿರುವ ಸಾಸ್, ಮಸಾಲೆ ಮತ್ತು ಇತರ ತರಕಾರಿಗಳ ರುಚಿಯು ಅಜ್ಜಿಗೆ ವಿಚಿತ್ರವೆನಿಸಿದೆ. ಸ್ವಲ್ಪ ಹೊತ್ತು ಪಿಜ್ಜಾವನ್ನು ನೆಕ್ಕಿದ ಬಳಿಕ ಅಜ್ಜಿಯು ನಗಲು ಆರಂಭಿಸುತ್ತಾರೆ. ಬಹುಶಃ ’ ಇಂಥದ್ದೂ ಒಂದು ಆಹಾರ ತಿಂದು ಜೀವಿಸುತ್ತಿದ್ದೀರಾ? ’ ಎಂದು ಅವರು ಮನಸ್ಸಿನಲ್ಲೇ ಪ್ರಶ್ನಿಸುತ್ತಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://www.youtube.com/watch?v=Y3d7l2imHOY