ತಮ್ಮ 53 ವರ್ಷದ ಹರೆಯದಲ್ಲಿ ಮಹಿಳೆಯೊಬ್ಬರು ಹತ್ತನೇ ತರಗತಿ ಉತ್ತೀರ್ಣರಾಗಿದ್ದು, ಈ ಸಾಧನೆಯನ್ನು ಆಕೆಯ ಮಗ ಖುಷಿಯಿಂದ ಹಂಚಿಕೊಂಡಿದ್ದಾರೆ. ಐರ್ಲೆಂಡ್‌ನಲ್ಲಿರುವ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಪ್ರಸಾದ್ ಜಂಬಳೆ ತಮ್ಮ ತಾಯಿಯ ಸ್ಫೂರ್ತಿ ಕಥೆಯನ್ನು ಜಾಲತಾಣದಲ್ಲಿ ಹೇಳಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.
37 ವರ್ಷಗಳ ನಂತರ 10 ನೇ ತರಗತಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಮಾತ್ರವಲ್ಲದೆ ಶೇ.79.60 ಅಂಕ ಗಳಿಸಿದ್ದಾರೆ.
ತಾಯಿ ಓದು ತ್ಯಜಿಸಿ ಕೆಲಸ ಮಾಡಲು ಪ್ರಾರಂಭಿಸಿದರು, ಅವರ ಕಿರಿಯ ಸಹೋದರರು ತಮ್ಮ ಅಧ್ಯಯನ ಮುಂದುವರೆಸಿದರು. ಮಹಾರಾಷ್ಟ್ರ ಸರ್ಕಾರವು ಯಾರಿಗಾದರೂ ಮತ್ತೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುತ್ತದೆ ಎಂದು ತಿಳಿದಾಗ, ಕಳೆದ ವರ್ಷ ಅರ್ಜಿ ಹಾಕಿದ್ದರು, ಆಫ್‌ಲೈನ್ ಮತ್ತು ಆನ್‌ಲೈನ್ ತರಬೇತಿಯ ವೆಚ್ಚವನ್ನು ಅಧ್ಯಯನ ಸಾಮಗ್ರಿಗಳೊಂದಿಗೆ ಸರ್ಕಾರವು ಉಚಿತವಾಗಿ ನೀಡಿತು, ಅದನ್ನು ಬಳಸಿ ರಾತ್ರಿ ಶಾಲೆಗೆ ತೆರಳಿ ಈ ಸಾಧನೆ ಮಾಡಿದ್ದಾರೆಂದು ಅವರು ಬರೆದುಕೊಂಡಿದ್ದಾರೆ.
ಅವರು ತಮ್ಮ ತಾಯಿಯ ಮಾರ್ಕ್‌ಶೀಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್‌ನಲ್ಲಿ ಲಗತ್ತಿಸಿದ್ದಾರೆ. ಯಾವಾಗಲೂ ನನ್ನ ತಾಯಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಜಂಬಳೆ ಬರೆದಿದ್ದಾರೆ.