
ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ ಟ್ಯೂನ್ ಎಲ್ಲರನ್ನೂ ಮೋಡಿ ಮಾಡಿದೆ. ಇದೀಗ, ತಾಯಿ ಮತ್ತು ಮಗ ಈ ಹಾಡಿಗೆ ನೃತ್ಯ ಮಾಡುವ ಮತ್ತೊಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ತಾಯಿ-ಮಗ ಇಬ್ಬರೂ ಬಹಳ ಲವಲವಿಕೆಯಿಂದ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರು ತಮ್ಮ ಪ್ರದರ್ಶನದ ಉದ್ದಕ್ಕೂ ನಗುತ್ತಿದ್ದು, ಬಹಳ ಆನಂದಿಸುತ್ತಾ ಇಬ್ಬರೂ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ತಾಯಿ-ಮಗನ ಈ ನೃತ್ಯ ನೋಡಲು ಬಹಳ ಮುದ್ದಾಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ತಾಯಿ-ಮಗನ ಅದ್ಭುತ ನೃತ್ಯ ಪ್ರದರ್ಶನಕ್ಕೆ ನೆಟ್ಟಿಗರು ಮನಸೋತಿದ್ದಾರೆ. ತಾಯಿ ಬಹಳ ಚೆನ್ನಾಗಿ ನೃತ್ಯ ಮಾಡಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
2020 ರಲ್ಲಿ ಸತೀಶ್ ರಥನಾಯಕ ಅವರ ಸಿಂಹಳೀಯ ಹಾಡು ಮನಿಕೆ ಮಾಗೆ ಹಿತೆ ಬಿಡುಗಡೆಯಾಯಿತು. ಮೇ ತಿಂಗಳಲ್ಲಿ ಯೋಹಾನಿ ಅವರ ಹೊಸ ಆವೃತ್ತಿ ಬಂದ ನಂತರ ಇದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.