alex Certify ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಯನ್ನು ಅಚ್ಚರಿಗೊಳಿಸಿದ ವ್ಯಕ್ತಿ; ವಿಡಿಯೋದಲ್ಲಿ ಪ್ಲೇ ಆಗಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಯನ್ನು ಅಚ್ಚರಿಗೊಳಿಸಿದ ವ್ಯಕ್ತಿ; ವಿಡಿಯೋದಲ್ಲಿ ಪ್ಲೇ ಆಗಿದ್ದೇನು ಗೊತ್ತಾ….?

ಹುಟ್ಟುಹಬ್ಬಕ್ಕೆ ಯಾರಾದರೂ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ಸಪ್ರೈಸ್ ಉಡುಗೊರೆ ನೀಡುತ್ತಾರೆ. ಇಲ್ಲೊಬ್ಬ ಭಾರತೀಯ ಮೂಲದ ವ್ಯಕ್ತಿ ತನ್ನ ಗೆಳತಿಗೆ ಅಂತಹುದೆ ಸರ್ಪೈಸ್ ಉಡುಗೊರೆಯನ್ನು ನೀಡಿದ್ದಾನೆ. ಇದನ್ನು ನೋಡಿದ ಗೆಳತಿ ಆನಂದಸಾಗರದಲ್ಲಿ ತೇಲಿದ್ದಾಳೆ.

ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಅಚ್ಚರಿಗೊಳಿಸಿದ್ದಾನೆ. ನ್ಯೂಯಾರ್ಕ್‌ನ ಅತ್ಯಂತ ಜನನಿಬಿಡ ಸ್ಥಳವೊಂದರಲ್ಲಿ ಆಕೆಯ ವಿಡಿಯೋವನ್ನು ಪ್ಲೇ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟೇಲ್ಸ್ ಬೈ ಲೇಖಾ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ, ಲೇಖಾ ತನ್ನ ಹುಟ್ಟುಹಬ್ಬದಂದು ಅತ್ಯಂತ ಹೃದಯಸ್ಪರ್ಶಿ ರೀತಿಯಲ್ಲಿ ತನ್ನ ಗೆಳೆಯನಿಂದ ಸಪ್ರೈಸ್ ಅನ್ನು ಪಡೆದ್ರು.

ಹೌದು, ಲೇಖಾ ಹಾಗೂ ಗೆಳೆಯ ಆಕಾಶ್ ದೊಡ್ಡ ಜಾಹೀರಾತು ಫಲಕದ ಮುಂದೆ ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಲೇಖಾ ಅವರ ಚಿತ್ರಗಳ ಸ್ಲೈಡ್‌ಶೋ ಬಿಲ್‌ಬೋರ್ಡ್‌ನಲ್ಲಿ ಪ್ಲೇ ಆಗಿದೆ. ಈ ವೇಳೆ ಆಕೆ ಅಚ್ಚರಿಗೊಂಡಳು. ಅಲ್ಲದೆ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಲೇಖಾಳಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಜೋಡಿಯ ಮೇಲೆ ಪ್ರೀತಿಯನ್ನು ಸುರಿಸಿದ್ದಾರೆ.

https://youtu.be/B78UGyFjMVY

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...