ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ಸಂಗೀತ ಇರೋದು ಸಾಮಾನ್ಯ. ಇದರ ನಡುವೆ ವಧು ಅಥವಾ ವರನ ಸ್ನೇಹಿತರ ಕೆಲವು ತಮಾಷೆಯ ಪ್ರಸಂಗವೂ ಇರುತ್ತದೆ. ವರನ ಸ್ನೇಹಿತರು ವಿಚಿತ್ರ ಉಡುಗೊರೆಗಳನ್ನು ನೀಡಿ ಹಾಸ್ಯ ಮಾಡುತ್ತಾರೆ.
ಪೆಟ್ರೋಲ್ ರೇಟ್ ಜಾಸ್ತಿಯಾದಾಗ ಕೆಲವರು 5 ಲೀ. ಪೆಟ್ರೋಲ್ ಅನ್ನು ಉಡುಗೊರೆಯನ್ನಾಗಿ ನೀಡಿರುವುದನ್ನು ನೀವು ಕೇಳಿರುತ್ತೀರಿ. ಹಾಗೆಯೇ ಇಲ್ಲೊಂದೆಡೆ ವಧು-ವರನಿಗೆ ನೀಡಿದ ಉಡುಗೊರೆ ಕಂಡು ಅತಿಥಿಗಳು ಬಿದ್ದು ಬಿದ್ದು ನಕ್ಕಿದ್ದಾರೆ.
ವಧು-ವರ ತಮ್ಮ ಮದುವೆಯ ಆರತಕ್ಷತೆಯ ಸಂಭ್ರಮದಲ್ಲಿದ್ದು, ವೇದಿಕೆಯ ಮೇಲೆ ನಿಂತಿದ್ದಾರೆ. ಈ ವೇಳೆ ವರನ ಸ್ನೇಹಿತರು ವಾಷಿಂಗ್ ಮೆಷಿನ್ ನ ದೊಡ್ಡ ಪೆಟ್ಟಿಗೆಯನ್ನು ಹಿಡಿದುಕೊಂಡು ವೇದಿಕೆಗೆ ಬರುತ್ತಾರೆ.
ಬಾಕ್ಸ್ ತುಂಬಾ ಭಾರವಿರುವಂತೆ ಅದನ್ನು ಕಷ್ಟಪಟ್ಟು ವೇದಿಕೆಯತ್ತ ತಂದು, ನವವಿವಾಹಿತರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಅವರಿಗೆ ಉಡುಗೊರೆಯನ್ನು ಹಸ್ತಾಂತರಿಸಿದ್ದಾರೆ.
ಸ್ನೇಹಿತರು ವಾಷಿಂಗ್ ಮೆಷಿನ್ ಬಾಕ್ಸ್ ಅನ್ನು ಹೊತ್ತುಕೊಂಡು ಬರುವಾಗ ಇದರಲ್ಲಿ ನಿಜವಾಗಲು ವಾಷಿಂಗ್ ಮೆಷಿನ್ ಇರಬಹುದು ಅಂತಾ ವಧು-ವರ ಅಂದುಕೊಂಡಿದ್ದಿರಬಹುದು. ಆದರೆ, ಅವರ ಕೈಗೆ ಗಿಫ್ಟ್ ಕೊಟ್ಟಾಗಲೇ ಗೊತ್ತಾಗಿದ್ದು, ಅದೊಂದು ಖಾಲಿ ಬಾಕ್ಸ್ ಅಂತಾ….. ಈ ವೇಳೆ ವಧು-ವರ ಇಬ್ಬರೂ ಕೂಡ ನಗೆಗಡಲಲ್ಲಿ ತೇಲಿದ್ದಾರೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ 81,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
https://youtu.be/TcuIOsQYB6Q