ತನ್ನ ವಧುವನ್ನು ಮಂಟಪಕ್ಕೆ ಸ್ವಾಗತಿಸಲು ಭರ್ಜರಿ ಡ್ಯಾನ್ಸ್ ಮಾಡುತ್ತಿರುವ ವರನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ.
ಹೂವಿನ ಅಲಂಕಾರಗಳ ನಡುವೆ ಮದುವೆಯ ಅಂಗಳಕ್ಕೆ ನಡೆದು ಬರುತ್ತಿರುವ ಮದುಮಗಳನ್ನು ಆಕೆಯ ಸಹೋದರರು ಕರೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದೇ ವೇಳೆ ಮದುಮಗ ಆಕೆಯತ್ತ ಕುಣಿಯುತ್ತಾ ಬರುತ್ತಾನೆ. ಇದೇ ವೇಳೆ ಡೋಲು ಹಾಗೂ ನಗಾಡಾ ವಾದ್ಯವನ್ನು ಹಿನ್ನೆಲೆಯಲ್ಲಿ ಕೇಳಬಹುದಾಗಿದೆ.
ಭಾವನಿಗೆ ಶೂ ಕೊಡಲು ಸತಾಯಿಸಿದ ವಧುವಿನ ಸಹೋದರಿ…! ಕ್ಯೂಟ್ ವಿಡಿಯೋ ವೈರಲ್
ಎರಡು ದಶಲಕ್ಷಕ್ಕಿಂತ ಹೆಚ್ಚು ವೀವ್ಸ್ ಪಡೆದಿರುವ ವಿಡಿಯೋವನ್ನು ದಿ ಚೋಪ್ರಾ ಇವೆಂಟ್ಸ್ ಹೆಸರಿನ ಖಾತೆಯೊಂದರ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ.
ಸಾಮಾನ್ಯವಾಗಿ ವರನ ಈ ರೀತಿ ಸಂಭ್ರಮ ಅಪರೂಪ. ಇದೇ ಕಾರಣಕ್ಕೆ ನೆಟ್ಟಿಗರ ಮನೆ ಗೆದ್ದಿದೆ ಈ ವಿಡಿಯೋ.
https://youtu.be/X9otPfU9_IM