
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಮದುವೆ ಸಮಾರಂಭದ ವಧು-ವರನದ್ದಾಗಿದೆ. ಟ್ವಿಟ್ಟರ್ ಹ್ಯಾಂಡಲ್ ಕ್ಯಾಪ್ಟನ್ ಹಿಂದೂಸ್ತಾನ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವರನೊಬ್ಬ ತನ್ನ ಹೆಂಡತಿಯ ಪಾದಗಳನ್ನು ಸ್ಪರ್ಶಿಸಿದ್ದಾನೆ. ಈ ವಿಡಿಯೋಗೆ ನೆಟ್ಟಿಗರು ಥಂಬ್ಸ್ ಅಪ್ ನೀಡಿದ್ದಾರೆ.
ವಿಡಿಯೋದಲ್ಲಿ ವಧು-ವರ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುತ್ತಾರೆ. ನಂತರ ವಧುವು ವರನ ಪಾದ ಮುಟ್ಟಿ ನಮಸ್ಕರಿಸಿದ್ರೆ, ವರ ಕೂಡ ವಧುವಿನ ಪಾದ ಸ್ಪರ್ಶಿಸಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನೂ ಕೆಲವರು ಆತ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದರೆ ಒಳ್ಳೆಯದು. ಆದರೆ, ಬಹುಶಃ ವರ ತಪ್ಪಾಗಿ (ಆಕೆಯನ್ನು ಅನುಸರಿಸಿ) ವಧುವಿನ ಕಾಲಿಗೆ ನಮಸ್ಕರಿಸಿರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಮದುವೆ ಸಂಪ್ರದಾಯಗಳ ಬಗ್ಗೆ ಯುವಕರಿಗೆ ತಿಳಿದಿರುವುದು ತೀರಾ ಕಮ್ಮಿ. ಹೀಗಾಗಿ ನೆಟ್ಟಿಗರು ಈ ಅನುಮಾನ ವ್ಯಕ್ತಪಡಿಸಿದ್ದಾರೆ.